ಬೆಂಗಳೂರಿನಿಂದ ಶಿವಮೊಗ್ಗಗೆ ಹಾರಿದ ಮೊದಲ ವಿಮಾನ, ಕೆಐಎನಲ್ಲೂ ಸಂಭ್ರಮದ ವಾತಾವರಣ; ಬಿಎಸ್ ವೈ ಪಾದಮುಟ್ಟಿ ನಮಸ್ಕರಿಸಿದ ಎಂಬಿಪಿ
ಇಂದು ನಗರದ ಏರ್ಪೋರ್ಟ್ ನಿಂದ ಮೊದಲ ಬಾರಿಗೆ ವಿಮಾನವೊಂದು ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಹಾರಿತು. ಅದಕ್ಕೂ ಮುನ್ನ ಕೆಐಎ ವಿಮಾನ ನಿಲ್ದಾಣದೊಳಗಿನ ರೆಸ್ಟ್ ರೂಮೊಂದರಲ್ಲಿ ಪಕ್ಷಭೇದ ಮರೆತು ರಾಜಕೀಯ ಗಣ್ಯರು ಒಟ್ಟಿಗೆ ಸೇರಿದಾಗ ಎಂಬಿ ಪಾಟೀಲ್, ಯಡಿಯೂರಪ್ಪನವರ ಪಾದಮುಟ್ಟಿ ನಮಸ್ಕರಿಸುವುದನ್ನು ನೋಡಬಹುದು.
ಬೆಂಗಳೂರು: ಶಿವಮೊಗ್ಗದಲ್ಲಂತೆ ಬೆಂಗಳೂರಿನ ಕೆಐಎ ವಿಮಾನ ನಿಲ್ದಾಣದಲ್ಲೂ (KIA airport) ಸಂಭ್ರಮದ ವಾತಾವರಣವಿತ್ತು. ಯಾಕಾಗಬೇಡ ಸ್ವಾಮಿ, ಇಂದು ನಗರದ ಏರ್ಪೋರ್ಟ್ ನಿಂದ ಮೊದಲ ಬಾರಿಗೆ ವಿಮಾನವೊಂದು ಶಿವಮೊಗ್ಗದಲ್ಲಿ (Shivamogga) ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಹಾರಿತು. ವಿಮಾನದಲ್ಲಿ ಹಾರಿದ ಗಣ್ಯರನ್ನು ಶಿವಮೊಗ್ಗಗೆ ಮೊದಲ ವಿಮಾನ ಹಾರಿಬಿಟ್ಟ ಇಂಡಿಗೋ ಸಂಸ್ಥೆ ಸತ್ಕರಿಸಿತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa), ಸಚಿವ ಎಂಬಿ ಪಾಟೀಲ್ (MB Patil), ಶಾಸಕ ಆರಗ ಜ್ಞಾನೇಂದ್ರ ಮತ್ತು ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ ಮತ್ತು ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಮತ್ತು ಹಲವಾರು ರೈತ ನಾಯಕರು ಮೊದಲ ಕಮರ್ಷಿಯಲ್ ವಿಮಾನದದಲ್ಲಿ ಶಿವಮೊಗ್ಗಗೆ ಪ್ರಯಾಣ ಬೆಳೆಸಿದರು. ಅದಕ್ಕೂ ಮುನ್ನ ಕೆಐಎ ವಿಮಾನ ನಿಲ್ದಾಣದೊಳಗಿನ ರೆಸ್ಟ್ ರೂಮೊಂದರಲ್ಲಿ ಪಕ್ಷಭೇದ ಮರೆತು ರಾಜಕೀಯ ಗಣ್ಯರು ಒಟ್ಟಿಗೆ ಸೇರಿದಾಗ ಎಂಬಿ ಪಾಟೀಲ್, ಯಡಿಯೂರಪ್ಪನವರ ಪಾದಮುಟ್ಟಿ ನಮಸ್ಕರಿಸುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ