ಬಂಗ್ಲೆಗುಡ್ಡದಲ್ಲಿ ಆದಿಶೇಷ ಡ್ರೈವಿಂಗ್ ಲೈಸೆನ್ಸ್ ಪತ್ತೆ: ಎಲ್ಲಿದ್ದರೂ ವಾಪಾಸ್​​ ಬಾ ಎಂದು ಮಗನಿಗಾಗಿ ಕಣ್ಣೀರಿಟ್ಟ ತಾಯಿ

Updated By: ಗಂಗಾಧರ​ ಬ. ಸಾಬೋಜಿ

Updated on: Sep 27, 2025 | 12:14 PM

ಧರ್ಮಸ್ಥಳದ ಬಂಗ್ಲೆಗುಡ್ಡದ ಬಳಿ 12 ವರ್ಷಗಳಿಂದ ನಾಪತ್ತೆಯಾಗಿದ್ದ ಆದಿಶೇಷ ಎಂಬ ವ್ಯಕ್ತಿಯ ಚಾಲನಾ ಪರವಾನಗಿ ಪತ್ತೆಯಾಗಿದೆ. ತುಮಕೂರು ಮೂಲದ ಆದಿಶೇಷನ ತಾಯಿ ಚನ್ನಮ್ಮ ಈ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ. ಎಲ್ಲಿದ್ದರೂ ಮನೆಗೆ ವಾಪಸ್ ಬಾ ಎಂದಿದ್ದಾರೆ. ಡಿಎಲ್ ಪತ್ತೆಯಾಗಿರುವುದು ಸದ್ಯ ಆತಂಕಕ್ಕೂ ಕಾರಣವಾಗಿದೆ.

ತುಮಕೂರು, ಸೆಪ್ಟೆಂಬರ್​ 27: ಧರ್ಮಸ್ಥಳದ ಬಂಗಲೆಗುಡ್ಡದ ಬಳಿ ತುಮಕೂರು ಮೂಲದ ಆದಿಶೇಷ ಎಂಬ ವ್ಯಕ್ತಿಯ ಚಾಲನಾ ಪರವಾನಗಿ (ಡಿಎಲ್) ಪತ್ತೆಯಾಗಿದೆ. ಸದ್ಯ ಇದು 12 ವರ್ಷಗಳಿಂದ ನಾಪತ್ತೆಯಾಗಿರುವ ಮಗನ ಬಗ್ಗೆ ತಾಯಿಗೆ ಆತಂಕ ಹೆಚ್ಚಿಸಿದೆ. ಈ ವಿಚಾರವಾಗಿ ಆದಿಶೇಷ ತಾಯಿ ಚನ್ನಮ್ಮ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನೀನು ಎಲ್ಲಿದ್ದರೂ ಸರಿ, ಮನೆಗೆ ವಾಪಸ್ ಬಾ ಎಂದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 27, 2025 12:12 PM