Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬರುವ ಲೋಕಸಭಾ ಚುನಾವಣೆಯ ನಂತರ ಭಾರತ ಬಿಜೆಪಿ-ಮುಕ್ತ ದೇಶವಾಗಲಿದೆ: ಸಂತೋಷ್ ಲಾಡ್, ಸಚಿವ

ಮುಂಬರುವ ಲೋಕಸಭಾ ಚುನಾವಣೆಯ ನಂತರ ಭಾರತ ಬಿಜೆಪಿ-ಮುಕ್ತ ದೇಶವಾಗಲಿದೆ: ಸಂತೋಷ್ ಲಾಡ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 07, 2023 | 5:13 PM

ಸಂಕ್ರಾತಿಯ ಬಳಿಕ ಸೂರ್ಯನ ಪಥ ಬದಲಾಗುವ ಹಾಗೆ, ಕರ್ನಾಟಕದಲ್ಲಿ ಸರ್ಕಾರ ಬದಲಾಗುತ್ತದೆ, ಸಿದ್ದರಾಮಯ್ಯ ಸರ್ಕಾರ ಉರುಳುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ ಅಂತ ಸಚಿವ ಸಂತೋಷ್ ಲಾಡ್ ಅವರನ್ನು ಹೇಳಿದಾಗ, ಅವರು ಬಹಳ ದಿನಗಳಿಂದ ಹಾಗೇ ಹೇಳುತ್ತಲೇ ಇದ್ದಾರೆ, ಅವರ ಭವಿಷ್ಯವಾಣಿಗೆ ಆಧಾರ ಏನು ಅಂತ ಗೊತ್ತಿಲ್ಲ ಅಂತ ಹೇಳಿದರು.

ಬಳ್ಳಾರಿ: ಕಾರ್ಮಿಕ ಸಚಿವ ಸಂತೋಶ್ ಲಾಡ್ (Santosh Lad) ಇಂದು ಬಳ್ಳಾರಿ ಜಿಲ್ಲೆಯ ಪ್ರವಾಸದಲ್ಲಿದ್ದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ (Congress government) ಇನ್ನು ಮೂರು ತಿಂಗಳಲ್ಲಿ ಉರುಳುತ್ತೆ ಇನ್ನಾರು ತಿಂಗಳಲ್ಲಿ ಉರುಳುತ್ತೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಆರ್ ಅಶೋಕ, ಕೆಎಸ್ ಈಶ್ವರಪ್ಪ, ಬಸವರಾಜ ಬೊಮ್ಮಾಯಿ (Basavaraj Bommai) ಮೊದಲಾದ ಹಲವಾರು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರೊಂದಿಗೆ ಈಗ ಹೆಚ್ ಡಿ ಕುಮಾರಸ್ವಾಮಿ ಕೂಡ ಸೇರಿದ್ದಾರೆ. ಸಂಕ್ರಾತಿಯ ಬಳಿಕ ಸೂರ್ಯನ ಪಥ ಬದಲಾಗುವ ಹಾಗೆ, ಕರ್ನಾಟಕದಲ್ಲಿ ಸರ್ಕಾರ ಬದಲಾಗುತ್ತದೆ, ಸಿದ್ದರಾಮಯ್ಯ ಸರ್ಕಾರ ಉರುಳುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ ಅಂತ ಸಚಿವ ಸಂತೋಷ್ ಲಾಡ್ ಅವರನ್ನು ಹೇಳಿದಾಗ, ಅವರು ಬಹಳ ದಿನಗಳಿಂದ ಹಾಗೇ ಹೇಳುತ್ತಲೇ ಇದ್ದಾರೆ, ಅವರ ಭವಿಷ್ಯವಾಣಿಗೆ ಆಧಾರ ಏನು ಅಂತ ಗೊತ್ತಿಲ್ಲ ಅದರೆ ತನಗೆ ಗೊತ್ತಿರುವ ಸಂಗತಿಯೇನೆಂದರೆ 2024 ಲೋಕಸಭಾ ಚುನಾವಣೆಯ ಬಳಿಕ ಭಾರತ ಬಿಜೆಪಿ ಮುಕ್ತ ದೇಶವಾಗಲಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ