ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಮತ್ತೊಮ್ಮೆ ಅಸಭ್ಯ ಪದ ಬಳಕೆ!

|

Updated on: Feb 24, 2024 | 10:45 AM

ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ರಾಜ್ಯದ ಪ್ರಸ್ತಾವನೆಗಳನ್ನು ತೆಗೆದುಕೊಂಡು ಅಲ್ಲಿಗೆ ಹೋಗಿ ಸಂಬಂಧಪಟ್ಟವರ ಜೊತೆ ಚರ್ಚಿಸಿದರೆ ಎಲ್ಲ ಸರಿಹೋಗುತ್ತದೆ, ಆದರೆ ಮುಖ್ಯಮಂತ್ರಿಗೆ ಅದು ಬೇಕಿಲ್ಲ ಎಂದು ಹೆಗಡೆ ಹೇಳಿದರು.

ಕಾರವಾರ: ಕೆಲದಿನಗಳ ಕಾಲ ಸುಮ್ಮನಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ (Ananth Kumar Hegde) ಈಗ ಮತ್ತೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ದಾಳಿ ಶುರುಮಾಡಿದ್ದಾರೆ. ಕಾರವಾರದಲ್ಲಿ ಕಾರ್ಯಕರ್ತರ ಸಭೆಯೊಂದರಲ್ಲಿ (party workers meet) ಮಾತಾಡಿರುವ ಅವರು ಸಿದ್ದರಾಮಯ್ಯನವರ ದುರಹಂಕಾರದಿಂದ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಅನುದಾನಗಳು ಸಿಗುತ್ತಿಲ್ಲ ಅಂತ ಹೇಳಿದರು. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ರಾಜ್ಯದ ಪ್ರಸ್ತಾವನೆಗಳನ್ನು ತೆಗೆದುಕೊಂಡು ಅಲ್ಲಿಗೆ ಹೋಗಿ ಸಂಬಂಧಪಟ್ಟವರ ಜೊತೆ ಚರ್ಚಿಸಿದರೆ ಎಲ್ಲ ಸರಿಹೋಗುತ್ತದೆ, ಆದರೆ ಮುಖ್ಯಮಂತ್ರಿಗೆ ಅದು ಬೇಕಿಲ್ಲ ಎಂದು ಹೆಗಡೆ ಹೇಳಿದರು. ಇವರು ಕೇಳಿದಾಕ್ಷಣ ಕೊಡಲು ಅದೇನು ಇವರಪ್ಪನ ಮನೆ ಆಸ್ತಿನಾ ಎಂದು ಹೇಳಿದ ಹೆಗಡೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅಸಭ್ಯ ಪದಗಳನ್ನು ಬಳಸಿದರು.

ತಮ್ಮ ರಾಜಕೀಯ ಬದುಕಿನಲ್ಲಿ ಹಲವಾರು ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ ಆದರೆ ಇಂಥ ದರಿದ್ರ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ ಎಂದು ಹೆಗಡೆ ಹೇಳಿದರು. ಅನಂತಕುಮಾರ ಹೆಗಡೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಸಕ್ರಿಯರಾಗುತ್ತಾರೆ, ಮೂಲಗಳ ಪ್ರಕಾರ ಈ ಬಾರಿ ಅವರಿಗೆ ಟಿಕೆಟ್ ನೀಡುವ ಲಕ್ಷಣಗಳಿಲ್ಲ, ಹಾಗಾಗೇ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ