ದಸರಾ ಹಬ್ಬದ ಬ್ರೇಕ್ ಬಳಿಕ ಡಿಕೆ ಶಿವಕುಮಾರ್- ಹೆಚ್ ಡಿ ಕುಮಾರಸ್ವಾಮಿ ಕೋಳಿಜಗಳ ಪುನರಾರಂಭ!

|

Updated on: Oct 25, 2023 | 12:32 PM

ಕೆಂಪೇಗೌಡ, ಶಿವಕುಮಾರ ಸ್ವಾಮೀಜಿ, ಕೆಂಗಲ್ ಹನುಮಂತಯ್ಯ ಮೊದಲಾದವರೆಲ್ಲ ರಾಮನಗರಕ್ಕೆ ಸೇರಿದವರು, ಅಂದರೆ ಬೆಂಗಳೂರಿನವರಾಗಿದ್ದವರು, ಎಂದು ಹೇಳಿದ ಶಿವಕುಮಾರ್, ಕುಮಾರಸ್ವಾಮಿ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ತನಗಿಲ್ಲ, ತನಗೊಂದು ಯೋಚನೆ ಹೊಳೆದಿದೆ ಅದನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡೋದಾಗಿ ಹೇಳಿದರು.

ಮೈಸೂರು: ಹಬ್ಬದ ಪ್ರಯುಕ್ತ ಒಂದೆರಡು ದಿನ ತಣ್ಣಗಾಗಿದ್ದ ಡಿಕೆ ಶಿವಕುಮಾರ್ (DK Shivakumar) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕೋಳಿಜಗಳ ಇವತ್ತು ಪುನರಾರಂಭಗೊಂಡಿದೆ. ಈ ಬಾರಿ ವಾಗ್ವಾದ ಶುರುವಾಗಿದ್ದು ಶಿವಕುಮಾರ್ ಕನಕಪುರ ಕ್ಷೇತ್ರವನ್ನು (Kanakapura constituency) ಬೆಂಗಳೂರು ನಗರ ಜಿಲ್ಲೆಗೆ ಸೇರಿಸುವ ಬಗ್ಗೆ ನೀಡಿರುವ ಹೇಳಿಕೆಯ ಹಿನ್ನಲೆಯಲ್ಲಿ. ತಮ್ಮ ಆಸ್ತಿಗಳು ಕನಕಪುರದಲ್ಲಿರುವುದರಿಂದ ಬೆಂಗಳೂರಿಗೆ ಸೇರಿಸಿ ಅವುಗಳನ್ನು ಮೌಲ್ಯ ಹೆಚ್ಚಿಸಿ ಮಾರಿಕೊಳ್ಳುವ ಏಕೈಕ ಉದ್ದೇಶದಿಂದ ಶಿವಕುಮಾರ್ ಈ ಹುನ್ನಾರಕ್ಕಿಳಿದಿದ್ದಾರೆ ಅಂತ ಕುಮಾರಸ್ವಾಮಿ ಟ್ವೀಟ್ ಮಾಡಿರುವುದಕ್ಕೆ ಮೈಸೂರಲ್ಲಿಂದು ಪ್ರತಿಕ್ರಿಯಿಸಿದ ಶಿವಕುಮಾರ್, ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಕೂಡ ಇಲ್ಲದಿರುವುದು ಖೇದಕರ, ತಮಗೆ ಗೊತ್ತಿರದ ವಿಷಯಗಳನ್ನು ತನ್ನ ತಂದೆ ಇಲ್ಲವೇ ಬೇರೆ ಯಾರಾದರೂ ತಿಳಿದವರನ್ನು ಕೇಳಿ ತಿಳಿದುಕೊಳ್ಳಲಿ ಎಂದು ತಿವಿದರು. ರಾಮನಗರ ಅಸಲಿಗೆ ಬೆಂಗಳೂರಿಗೆ ಸೇರಿದ್ದು; ಕೆಂಪೇಗೌಡ, ಶಿವಕುಮಾರ ಸ್ವಾಮೀಜಿ, ಕೆಂಗಲ್ ಹನುಮಂತಯ್ಯ ಮೊದಲಾದವರೆಲ್ಲ ರಾಮನಗರಕ್ಕೆ ಸೇರಿದವರು, ಅಂದರೆ ಬೆಂಗಳೂರಿನವರಾಗಿದ್ದವರು, ಎಂದು ಹೇಳಿದ ಶಿವಕುಮಾರ್, ಕುಮಾರಸ್ವಾಮಿ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ತನಗಿಲ್ಲ, ತನಗೊಂದು ಯೋಚನೆ ಹೊಳೆದಿದೆ ಅದನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡೋದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on