ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಯಾರೇ ಉಲ್ಲಂಘಿಸಿದ್ದರೂ ಕ್ರಮ ಜರುಗಿಸಲಾಗುವುದು: ಈಶ್ವರ್ ಖಂಡ್ರೆ, ಆರಣ್ಯ ಖಾತೆ ಸಚಿವ

ಚಲನಚಿತ್ರ ನಟರಾದ ಜಗ್ಗೇಶ್, ದರ್ಶನ್ ಮೊದಲಾದ ಸೆಲಿಬ್ರಿಟಿಗಳು ಹುಲಿಯುಗುರುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದೇ ಅಂತ ಕೇಳಿದ ಪ್ರಶ್ನೆಗೆ, ನಾಡಿನ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ, ಅದರ ಮುಂದೆ ಯಾರೂ ದೊಡ್ಡವರು ಚಿಕ್ಕವರಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಯಾರೇ ಉಲ್ಲಂಘಿಸಿದ್ದರೂ ಕ್ರಮ ಜರುಗಿಸಲಾಗುವುದು: ಈಶ್ವರ್ ಖಂಡ್ರೆ, ಆರಣ್ಯ ಖಾತೆ ಸಚಿವ
|

Updated on: Oct 25, 2023 | 1:18 PM

ಕಲಬುರಗಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ (Eshwar Khandre) 1978ರಲ್ಲಿ ಜಾರಿಗೆ ಬಂದ ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act) ಅಡಿ ಯಾರೇ ಅಪರಾಧಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಲಾಗುವುದು ಎಂದು ಹೇಳಿದರು. ಹಲವು ತಿದ್ದುಪಡಿಗಳನ್ನು ಕಂಡಿರುವ ಕಾಯ್ದೆ ಅಡಿ ಹುಲಿ ಚರ್ಮ, ಹುಲಿ ಉಗುರು, ಜಿಂಕೆ ಚರ್ಮ, ಜಿಂಕೆ ಕೊಂಬು, ಆನೆದಂತ ಮೊದಲಾದವುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಚಿವ ಹೇಳಿದರು. ಚಲನಚಿತ್ರ ನಟರಾದ ಜಗ್ಗೇಶ್, ದರ್ಶನ್ (Jaggesh, Darshan) ಮೊದಲಾದ ಸೆಲಿಬ್ರಿಟಿಗಳು ಹುಲಿಯುಗುರುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದೇ ಅಂತ ಕೇಳಿದ ಪ್ರಶ್ನೆಗೆ, ನಾಡಿನ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ, ಅದರ ಮುಂದೆ ಯಾರೂ ದೊಡ್ಡವರು ಚಿಕ್ಕವರಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us