ದಸರಾ ಮಹೋತ್ಸವನ್ನು ಅದ್ದೂರಿಯಾಗಿ ನೆರವೇರಿಸಿದ 14 ಆನೆಗಳು ಇಂದು ವಾಪಸ್ಸು ಕಾಡಿಗೆ

|

Updated on: Oct 14, 2024 | 3:18 PM

ಆನೆಗಳು ವಾಪಸ್ಸು ಹೋಗುತ್ತಿರುವ ಸುದ್ದಿಕೇಳಿ ಬೆಳಗ್ಗೆ ಅವುಗಳನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರು ಕಣ್ಣೀರು ಹಾಕಿದರೆಂದು ಅರಣ್ಯಾಧಿಕಾರಿ ಹೇಳಿದರು. ಅನೆಗಳ ನೆನಪಿನ ಶಕ್ತಿ ಬಹಳ ಚೆನ್ನಾಗಿರುವುದರಿಂದ ಅವೆಲ್ಲ ಮೈಸೂರನ್ನು ಮಿಸ್ ಮಾಡಿಕೊಳ್ಳುತ್ತವೆ ಎನ್ನುವ ಪ್ರಭುಗೌಡ 8-10 ದಿನಗಳ ತರುವಾಯ ಅವುಗಳನ್ನು ನೋಡಲು ಹೋಗಲಿದ್ದಾರಂತೆ!

ಮೈಸೂರು: ಸುಮಾರು ಎರಡು ತಿಂಗಳು ಕಾಲ ಮೈಸೂರು ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದು ಅತ್ಯಂತ ಯಶಸ್ವೀಯಾಗಿ ಜಂಬೂ ಸವಾರಿಯನ್ನು ಪೂರ್ತಿಗೊಳಿಸಿದ ಅಭಿಮನ್ಯು ನೇತೃತ್ವದ 14 ಆನೆಗಳ ಪಡೆ ಇಂದು ವಾಪಸ್ಸು ತಮ್ಮ ಕ್ಯಾಂಪ್​ಗಳಿಗೆ ಹಿಂತಿರುಗುತ್ತಿದೆ. ಆನೆಗಳು ಮರಳಿ ಕಾಡಿಗೆ ಹೋಗುತ್ತಿರೋದು ಡಿಸಿಎಫ್ ಡಾ ಐಬಿ ಪ್ರಭುಗೌಡ ಅವರ ಹೃದಯವನ್ನು ಭಾರವಾಗಿಸಿದೆ. ಆನೆಗಳು ತಮ್ಮ ಶಿಬಿರಗಳಿಗೆ ಹೋದ ಬಳಿಕ ದಿನವಿಡೀ ಅಲ್ಲೇ ಇರುತ್ತಾವಾದರೂ ರಾತ್ರಿ ಸಮಯದಲ್ಲಿ ಮಾತ್ರ ಕಾಡಿಗೆ ಬಿಡಲಾಗುತ್ತದೆ ಎಂದು ಪ್ರಭುಗೌಡ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗಜಪಡೆಯ ಆಗಮನದೊಂದಿಗೆ ಮೈಸೂರಲ್ಲಿ ಶುರುವಾದ ದಸರಾ ಮಹೋತ್ಸವ-2024 ಕಲರವ

Follow us on