ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕೆಜಿಎಫ್ ಬಾಬುಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಬೇಕಂತೆ!

|

Updated on: Sep 18, 2023 | 5:22 PM

ವಿಧಾನ ಸಭಾ ಚುನಾವಣೆಯಲ್ಲಿ ರೂ. 175 ಕೋಟಿ ಖರ್ಚು ಮಾಡಿದಾಗ್ಯೂ ಮತ್ತು ಅವರೇ ಹೇಳುತ್ತಿರುವ ಹಾಗೆ ಬಡವರಿಗಾಗಿ 500 ಮನೆ ಕಟ್ಟಿಸುತ್ತಿದ್ದರೂ ಕೇವಲ 20,000 ವೋಟು ಗಿಟ್ಟಿಸುವವಲ್ಲಿ ಮಾತ್ರ ಸಫಲರಾದವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆಯನ್ನು ಎಲ್ಲಿಂದ ತಂದುಕೊಳ್ಳುತ್ತಾರೋ? ಅಷ್ಟಕ್ಕೂ ಕಾಂಗ್ರೆಸ್ ನಾಯಕರು ಬಾಬುಗೆ ಟಿಕೆಟ್ ನೀಡುವ ಬಗ್ಗೆ ಕನಿಷ್ಟ ಯೋಚನೆಯಾದರೂ ಮಾಡಬಹುದೇ?

ಬೆಂಗಳೂರು: ಕುಬೇರ ಕೆಜಿಎಫ್ ಬಾಬು (KGF Babu) ಹೊಸ ವರಾತ ಶುರುವಿಟ್ಟಿಕೊಂಡಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಸುಣ್ಣವಾದ ಬಾಬುಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಬೇಕಂತೆ! ಇದೇ ವಿಷಯವಾಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಲು ಬಂದಾಗ ಅವರು ಸಿಕ್ಕಿಲ್ಲ. ಶಿವಕುಮಾರ್ ನಿವಾಸದ ಬಳಿಯೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಾಬು, ಮುಂಬೈನಲ್ಲಿ ಬ್ಯಾಕೊಂದು ಮುಟ್ಟುಗೋಲು ಹಾಕಿಕೊಂಡಿದ್ದ ಸುಮಾರು 2,000 ಕೋಟಿ ಬೆಲೆ ಬಾಳುವ ಆಸ್ತಿಯೊಂದು ಕೇವಲ ರೂ. 275 ಕೋಟಿಗೆ ಸಿಕ್ಕಿದ್ದು, ಅದರ ಮಾರಾಟದಿಂದ ಸಿಗುವ ಹಣವನ್ನು (ರೂ. 2,000 ಕೋಟಿ) ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಖರ್ಚು ಮಾಡುವುದಾಗಿ ಹೇಳಿದರು. ವಿಧಾನ ಸಭಾ ಚುನಾವಣೆಯಲ್ಲಿ ರೂ. 175 ಕೋಟಿ ಖರ್ಚು ಮಾಡಿದಾಗ್ಯೂ ಮತ್ತು ಅವರೇ ಹೇಳುತ್ತಿರುವ ಹಾಗೆ ಬಡವರಿಗಾಗಿ 500 ಮನೆ ಕಟ್ಟಿಸುತ್ತಿದ್ದರೂ ಕೇವಲ 20,000 ವೋಟು ಗಿಟ್ಟಿಸುವವಲ್ಲಿ ಮಾತ್ರ ಸಫಲರಾದವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆಯನ್ನು ಎಲ್ಲಿಂದ ತಂದುಕೊಳ್ಳುತ್ತಾರೋ? ಅಷ್ಟಕ್ಕೂ ಕಾಂಗ್ರೆಸ್ ನಾಯಕರು ಬಾಬುಗೆ ಟಿಕೆಟ್ ನೀಡುವ ಬಗ್ಗೆ ಕನಿಷ್ಟ ಯೋಚನೆಯಾದರೂ ಮಾಡಬಹುದೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ