ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಸ್ವಾಮಿ, ಗೋವಿಂದ ಬಾಬುರನ್ನು ಬಿಎಸ್ ಯಡಿಯೂರಪ್ಪನವರಿಗೆ ಪರಿಚಯಿಸಿದ್ದರು!

ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಸ್ವಾಮಿ, ಗೋವಿಂದ ಬಾಬುರನ್ನು ಬಿಎಸ್ ಯಡಿಯೂರಪ್ಪನವರಿಗೆ ಪರಿಚಯಿಸಿದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Sep 18, 2023 | 4:24 PM

ಗೋವಿಂದ ಪೂಜಾರಿಯಿಂದ ರೂ. 1.5 ಕೋಟಿ ಪಡೆದಿರುವ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಹಾಲಶ್ರೀ ಅಭಿನವ ಸ್ವಾಮಿ, ಚುನಾವಣೆಗೆ ಮೊದಲು ಪೂಜಾರಿಯನ್ನು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ ಪರಿಚಯ ಮಾಡಿಸಿದ ಸಂದರ್ಭದಲ್ಲಿ ತೆಗೆದ ಫೋಟೋಗಳು ಬೆಳಕಿಗೆ ಬಂದಿವೆ.

ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣ (Chaitra Kundapura fraud case) ದಿನಕ್ಕಿಷ್ಟು ಗೊಂದಲಮಯವಾಗುತ್ತಿದೆ. ವಿಚಾರಣೆ ಸಮಯದಲ್ಲಿ ಅಸ್ವಸ್ಥಳಾದಂತೆ ನಟಿಸಿ ನಗರದ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಚೈತ್ರಾಳನ್ನು ಡಿಸ್ಚಾರ್ಜ್ ಮಾಡಲಾಗಿದ್ದು ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ. ಅಕೆ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ದೂರಿನಲ್ಲಿ ಹಲವರ ಹೆಸರನುಗಳನ್ನು ಪ್ರಸ್ತಾಪ ಮಾಡಿದ್ದಾಳೆ. ಅವರೆಲ್ಲ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ ಗೋವಿಂದ ಪೂಜಾರಿಯಿಂದ ರೂ. 1.5 ಕೋಟಿ ಪಡೆದಿರುವ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಹಾಲಶ್ರೀ ಅಭಿನವ ಸ್ವಾಮಿ (Halashri Abhinava Swamy), ಚುನಾವಣೆಗೆ ಮೊದಲು ಪೂಜಾರಿಯನ್ನು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ (BS Yediyurappa) ಪರಿಚಯ ಮಾಡಿಸಿದ ಸಂದರ್ಭದಲ್ಲಿ ತೆಗೆದ ಫೋಟೋಗಳು ಬೆಳಕಿಗೆ ಬಂದಿವೆ. ಪೂಜಾರಿಯನ್ನು ಟಿಕೆಟ್ ಆಕಾಂಕ್ಷಿಯೆಂದು ಪರಿಚಯಿಸಲಾಯಿತೇ ಅಥವಾ ಕೇವಲ ಒಬ್ಬ ಉದ್ಯಮಿ ಅಂತ ಪರಿಚಯಿಸಲಾಯಿತೇ ಅನ್ನೋದು ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 18, 2023 04:23 PM