ಸಿಎಂ ಸಿದ್ದರಾಮಯ್ಯ ಬಂದುಹೋದ ನಂತರ ಬಯಲಾಯಿತು ವಿಕ್ಟೋರಿಯ ಆಸ್ಪತ್ರೆಯ ನಿಜಬಣ್ಣ

Updated on: Aug 06, 2025 | 5:36 PM

ವೈದ್ಯರು ಚೆನ್ನಾಗಿದ್ದಾರೆ, ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಸುಮಿತ್ರಾ ಮತ್ತು ವಿಕಾಸ್ ಇಬ್ಬರೂ ಹೇಳುತ್ತಾರೆ. ಇತರ ಸಿಬ್ಬಂದಿ, ಲ್ಯಾಬ್ ಮತ್ತು ಫಾರ್ಮೇಸಿಯವರು ದರ್ಪ ಪ್ರದರ್ಶಿಸುತ್ತಾರೆ ಎಂದು ಸುಮಿತ್ರಾ ಹೇಳಿದರೆ, ಹೆಗ್ಗಣಗಳ ಕಾಟ ವಿಪರೀತವಾಗಿದೆ, ಆಸ್ಪತ್ರೆಯಲ್ಲಿ ಓಬೀರಾಯನ ಕಾಲದ ಸಾಫ್ಟ್​ವೇರ್ ಬಳಸುತ್ತಿರುವುದರಿಂದ ಬಿಲ್ಲಿಂಗ್ ವಿಭಾಗದಲ್ಲಿ ತಡವಾಗಿ ಜನ ಉದ್ದುದ್ದ ಸಾಲುಗಳಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ವಿಕಾಸ್ ಹೇಳುತ್ತಾರೆ.

ಬೆಂಗಳೂರು, ಆಗಸ್ಟ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ ಅಚೆ ಹೋಗುತ್ತಿದ್ದಂತೆಯೇ ವಿಕ್ಟೋರಿಯ ಮತ್ತು ವಾಣಿ ವಿಲಾಸ್ ಆಸ್ಪತ್ರೆಗಳ ಹೂರಣ ಹೊರಬಿದ್ದಿದೆ. ಸಿಎಂ ಆಸ್ಪತ್ರೆಯ ಅವರಣದಲ್ಲಿರುವವರೆಗೆ ಎಲ್ಲವೂ ಚೆನ್ನಾಗಿದೆ ಎಂಬ ಚಿತ್ರಣ ನೀಡಲು ಪ್ರಯತ್ನಿಸಲಾಗಿತ್ತು. ಸಿಎಂ ಜೊತೆ ಬಂದಿದ್ದ ವೈದ್ಯಕೀಯ ಶಿಕ್ಷಣಗಳ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್ (Dr Sharan Prakash Patil) ಅವರು; ರೋಗಿಗಳು ಸಿಎಂ ಜೊತೆ ಮಾತಾಡುವಾಗ ಮಧ್ಯೆಪ್ರವೇಶ ಮಾಡುತ್ತಿದ್ದರು, ಯಾಕೆ ಅಂತ ಸುಮಿತ್ರಾ ಮತ್ತು ವಿಕಾಸ್ ಎನ್ನುವವರ ಮಾತುಗಳನ್ನು ಕೇಳಿದರೆ ಗೊತ್ತಾಗುತ್ತದೆ. ವಿಕ್ಟೋರಿಯದಂಥ ಭಾರೀ ಆಸ್ಪತ್ರೆಗೆ ರೋಗಿಗಳಿಗಾಗಿ ಕೇವಲ ಒಂದು ಶೌಚಾಲಯ ಮಾತ್ರ ಇದೆ ಅಂದರೆ ನಂಬುತ್ತೀರಾ? ವಾಣಿ ವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಇಲ್ಲಿ ಬಿಸಿ ನೀರು ದೂರದ ಮಾತು, ತಣ್ಣೀರು ಕೂಡ ಸಿಗಲ್ಲ, ನೀರು ಬೇಕಾದರೆ ಕ್ಯಾಂಟೀನ್​​ಗೆ ಹೋಗಬೇಕು ಎಂದು ವಿಕಾಸ್ ಹೇಳುತ್ತಾರೆ.

ಇದನ್ನೂ ಓದಿ:  ಒಳ ಮೀಸಲಾತಿ ವರದಿ ಕೈಸೇರಿದೆ, ಶಿಫಾರಸ್ಸುಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು: ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 06, 2025 05:35 PM