AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ ಮೀಸಲಾತಿ ವರದಿ ಕೈಸೇರಿದೆ, ಶಿಫಾರಸ್ಸುಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು: ಸಿದ್ದರಾಮಯ್ಯ

ಒಳ ಮೀಸಲಾತಿ ವರದಿ ಕೈಸೇರಿದೆ, ಶಿಫಾರಸ್ಸುಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 04, 2025 | 2:39 PM

Share

ನಾಳೆ ನಗರದ ಫ್ರೀಡಂ ಪಾರ್ಕ್​ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಮತದಾನ ಹಕ್ಕು ಉಳಿಸಿ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಮುಂದೂಲಾಗಿದೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಶುಕ್ರವಾರದಂದು ಬೆಂಗಳೂರಿಗೆ ಆಗಮಿಸಿ ಸಮಾವೇಶವನ್ನು ನಡೆಸಲಿದ್ದಾರೆ. ಈ ವಿದ್ಯಮಾನ ಪ್ರಾಯಶಃ ಸಿದ್ದರಾಮಯ್ಯನವರ ಗಮನಕ್ಕೆ ಬಂದಿರಲಿಲ್ಲ.

ಬೆಂಗಳೂರು, ಆಗಸ್ಟ್ 4: ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ (Justice Nagamohan Das Commission) ಮತ್ತು ಆಯೋಗದ ಸಿಬ್ಬಂದಿ ವರದಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು. ಅಗಸ್ಟ್ 7ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಚರ್ಚಿಸಲಾಗವುದು ಎಂದು ಅವರು ಹೇಳಿದರು. ದಲಿತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ವರದಿಯಲ್ಲಿ ಚರ್ಚೆಯಾಗಿದೆ. ವರದಿ ಸಲ್ಲಿಕೆ ವಿಳಂಬವಾಗಿರುವ ಕುರಿತು ಯಾರೂ ಚಕಾರವೆತ್ತಿಲ್ಲ ಎಂದು ಸಿದ್ದರಾಮಯ್ಯನವರು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.

ಇದನ್ನೂ ಓದಿ:  ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 04, 2025 02:38 PM