ಮೈಸೂರು ದಸರಾ: ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ

Updated By: ಪ್ರಸನ್ನ ಹೆಗಡೆ

Updated on: Oct 05, 2025 | 1:03 PM

ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಗೆಂದು ಮೈಸೂರಿಗೆ ಬಂದಿದ್ದ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲಾಗಿದ್ದು, ಸಾಂಪ್ರದಾಯಿಕ ಪೂಜೆ ನೆರವೇರಿಸಿ ಕಳುಹಿಸಿಕೊಡಲಾಗಿದೆ. ಇನ್ನು ಕಾಡಿಗೆ ಹೊರಟ ಆನೆಗಳ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಪ್ರಸಂಗವೂ ನಡೀತು.

ಮೈಸೂರು, ಅಕ್ಟೋಬರ್​ 05: ವಿಶ್ವ ವಿಖ್ಯಾತ ಮೈಸೂರು ದಸರಾ (Dasara)  ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಆ ಬೆನ್ನಲ್ಲೇ ಜಂಬೂಸವಾರಿಗೆಂದು ಮೈಸೂರಿಗೆ ಬಂದಿದ್ದ ಗಜಪಡೆ ಕಾಡಿನತ್ತ ಹೊರಟಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ಬೀಳ್ಕೊಡುಗೆ ನೀಡಲಾಗಿದ್ದು, ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ. ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಏಕಲವ್ಯ, ಕಂಜನ್, ಧನಂಜಯ, ಲಕ್ಷ್ಮಿ, ಕಾವೇರಿ, ಶ್ರೀಕಂಠ, ಸುಗ್ರೀವ ,ಗೋಪಿ, ರೂಪ, ಹೇಮಾವತಿ ಆನೆಗಳು  ಲಾರಿಗಳ‌ ಮೂಲಕ ಕಾಡಿಗೆ ತೆರಳಲಿವೆ. ಇನ್ನು ಕಾಡಿಗೆ ಹೊರಟ ಆನೆಗಳ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಪ್ರಸಂಗವೂ ನಡೀತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 05, 2025 01:00 PM