VIDEO: ವಾಟ್ ಎ ಕ್ಯಾಚ್: ಟಿಮ್ ಡೇವಿಡ್ ಫೀಲ್ಡಿಂಗ್ಗೆ ಪ್ರೇಕ್ಷಕರು ಫಿದಾ
New Zealand vs Australia, 3rd T20I: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 18 ಓವರ್ಗಳಲ್ಲಿ 160 ರನ್ ಬಾರಿಸಿ 3 ವಿಕೆಟ್ಗಳ ಜಯ ಸಾಧಿಸಿದೆ.
ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಟಿಮ್ ಡೇವಿಡ್ ಹಿಡಿದ ಕ್ಯಾಚ್ ವಿಡಿಯೋ ವೈರಲ್ ಆಗಿದೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 41 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಕಣಕ್ಕಿಳಿದ ಮಾರ್ಕ್ ಚಾಪ್ಮನ್ ತಾನೆದುರಿಸಿದ ಮೂರನೇ ಎಸೆತದಲ್ಲೇ ಆಕರ್ಷಕ ಬೌಂಡರಿ ಬಾರಿಸಿದ್ದರು. ಅಲ್ಲದೆ ಶಾನ್ ಅಬಾಟ್ ಎಸೆದ ಈ ಓವರ್ನ ನಾಲ್ಕನೇ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಮಿಡ್ ಆನ್ನತ್ತ ಚಿಮ್ಮಿದ ಚೆಂಡನ್ನು ಹಿಮ್ಮುಖವಾಗಿ ಓಡಿ ಹೋಗಿ ಡೈವ್ ಹೊಡೆದು ಹಿಡಿಯುವಲ್ಲಿ ಟಿಮ್ ಡೇವಿಡ್ ಯಶಸ್ವಿಯಾಗಿದ್ದಾರೆ.
ಇದೀಗ ಟಿಮ್ ಡೇವಿಡ್ ಅವರ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 18 ಓವರ್ಗಳಲ್ಲಿ 160 ರನ್ ಬಾರಿಸಿ 3 ವಿಕೆಟ್ಗಳ ಜಯ ಸಾಧಿಸಿದೆ.
TV9 Network ನ್ಯೂಸ್ ಡೈರೆಕ್ಟರ್ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್
ಕೆಂಪೇಗೌಡ ಏರ್ಪೋಟ್ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ

