ಲೋಕಸಭಾ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಪಕ್ಷದ ಶಾಸಕರೇ ಉರುಳಿಸಲಿದ್ದಾರೆ: ಆರ್ ಅಶೋಕ

|

Updated on: May 15, 2024 | 2:41 PM

ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗದ ಕಾರಣ ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಮತ್ತು ಯಾಕಾದರೂ ನಮ್ಮ ಪಕ್ಷ ಅಧಿಕಾರಕ್ಕೆ ಬಂತೋ ಅಂತ ಪರಿತಪಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಉರುಳಲು ಅವರೇ ಕಾರಣರಾಗಲಿದ್ದಾರೆ. ಸರ್ಕಾರದ ಸುಳ್ಳು ಮತ್ತು ಭ್ರಷ್ಟಾಚಾರದಿಂದ ಜನ ಕೂಡ ಬೇಸತ್ತಿದ್ದಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ (Siddaramaiah government) ಪತನಗೊಳ್ಳುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಅದು ಹೇಗೆ ಸರ್ಕಾರ ಬೀಳುತ್ತೆ ಅಂತ ಹೇಳುವ ಕಾಂಗ್ರೆಸ್ ನಾಯಕರು ಹಿಂದೆ ನಡೆದಿದ್ದನ್ನು ಜ್ಞಾಪಿಸಿಕೊಳ್ಳಲಿ. ಆಗ ಕಾಂಗ್ರೆಸ್ ಪಕ್ಷದ 15 ಶಾಸಕರು (MLAs) ಬಿಜೆಪಿ ಸೇರಿದಾಗ ಮತ್ತು ಸಮ್ಮಿಶ್ರ ಸರ್ಕಾರ ಉರುಳಿ ಬಿದ್ದಾಗ ಸಿದ್ದರಾಮಯ್ಯ ಮತ್ತು ಇತರ ನಾಯಕರಿಗೆ ಏನೂ ಮಾಡಲಾಗಲಿಲ್ಲ ಎಂದು ಅಶೋಕ ಹೇಳಿದರು. ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬೇರೆಯವರು ಬೀಳಿಸುವ ಪ್ರಮೇಯ ಉದ್ಭವಿಸಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗದ ಕಾರಣ ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಮತ್ತು ಯಾಕಾದರೂ ನಮ್ಮ ಪಕ್ಷ ಅಧಿಕಾರಕ್ಕೆ ಬಂತೋ ಅಂತ ಪರಿತಪಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಉರುಳಲು ಅವರೇ ಕಾರಣರಾಗಲಿದ್ದಾರೆ. ಸರ್ಕಾರದ ಸುಳ್ಳು ಮತ್ತು ಭ್ರಷ್ಟಾಚಾರದಿಂದ ಜನ ಕೂಡ ಬೇಸತ್ತಿದ್ದಾರೆ. ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ನಿನ್ನೆ ಸಭೆ ನಡೆಸಿದ್ದು, ಇದುವರೆಗೆ ಹಣ ಬಿಡುಗಡೆ ಮಾಡಿರದ ಅಂಶವನ್ನು ಸಾಬೀತು ಮಾಡುತ್ತದೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ: ಆರ್ ಅಶೋಕ ವಾಗ್ದಾಳಿ

Follow us on