ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ

Updated on: Apr 14, 2025 | 8:52 PM

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಭಂಗಾರ್‌ನಲ್ಲಿ ಜನಸಮೂಹವನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆದರೂ ಪೊಲೀಸರ ಐದು ‌ಬೈಕ್‌ಗಳು ಮತ್ತು ಒಂದು ವ್ಯಾನ್ ಅನ್ನು ಗುಂಪೊಂದು ಸುಟ್ಟುಹಾಕಿದೆ. ಪೊಲೀಸರ ಪ್ರಕಾರ, ಪಕ್ಷದ ನಾಯಕ ಮತ್ತು ಭಂಗಾರ್ ಶಾಸಕ ನೌಶಾದ್ ಸಿದ್ದೀಕ್ ಅವರು ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಲು ಮಧ್ಯ ಕೋಲ್ಕತ್ತಾದ ರಾಮಲೀಲಾ ಮೈದಾನದ ಕಡೆಗೆ ಹೋಗುತ್ತಿದ್ದ ಬಸಂತಿ ಹೆದ್ದಾರಿಯ ಭೋಜೆರ್‌ಹತ್ ಬಳಿ ಪೊಲೀಸರು ಐಎಸ್‌ಎಫ್ ಬೆಂಬಲಿಗರನ್ನು ತಡೆದಾಗ ಘರ್ಷಣೆ ಭುಗಿಲೆದ್ದಿತು.

ಕೋಲ್ಕತ್ತಾ, ಏಪ್ರಿಲ್ 14: ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Amendment Act) ವಿರೋಧಿಸಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಭಂಗಾರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಐಎಸ್‌ಎಫ್ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಈ ವೇಳೆ ಅವರು ಪೊಲೀಸರ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಇದಾದ ನಂತರ ಪೊಲೀಸರು ಜನಸಮೂಹವನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ಕೊಲ್ಕತ್ತಾದ ಪೂರ್ವ ಅಂಚಿನಲ್ಲಿರುವ ಭಂಗಾರ್‌ನಲ್ಲಿ, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ, ಗುಂಪೊಂದು ಐದು ಪೊಲೀಸ್ ಬೈಕ್‌ಗಳು ಮತ್ತು ಒಂದು ಪೊಲೀಸ್ ವ್ಯಾನ್ ಅನ್ನು ಸುಟ್ಟುಹಾಕಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ