ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕಮಾರ್ ಒಟ್ಟಿಗೆ ಹೋಟೆಲೊಂದಕ್ಕೆ ಊಟಕ್ಕೆ ಹೊರಟರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 15, 2023 | 4:56 PM

ಗಣ್ಯರ ಜೊತೆ ಅಷ್ಟೆಲ್ಲ ಆಧಿಕಾರಿಗಳು, ಭದ್ರತಾ ಸಿಬ್ಬಂದಿ ಇರುತ್ತಾರಲ್ಲ? ಆಫ್ ಕೋರ್ಸ್ ಅವರು ಕೂಡ ಹಸಿದಿರುತ್ತಾರೆ. ಅಂದರೆ ಸಿದ್ದರಾಮಯ್ಯ ಆಗಲೀ, ಶಿವಕುಮಾರ್ ಆಗಲೀ ಅಥವಾ ಬೇರೆ ಯಾವುದೇ ಸಚಿವನಾಗಲೀ; ತಮ್ಮೊಂದಿಗಿರುವ ಜನ-ಅಧಿಕಾರಿ, ಭದ್ರತಾ ಸಿಬ್ಬಂದಿ, ಕಾರ್ಯಕರ್ತರಿಗೂ ಊಟ ಕೊಡಿಸುತ್ತಾರೆಯೇ?

ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆ (Independence Day Celebrations) ಅಂಗವಾಗಿ ನಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಹಸಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಗರದ ಖ್ಯಾತ ಖಾಸಗಿ ಹೋಟೆಲೊಂದರಲ್ಲಿ ಒಟ್ಟಿಗೆ ಊಟಮಾಡಿದರು. ಇಬ್ಬರೂ ಉನ್ನತ ಹುದ್ದೆಗಳಲ್ಲಿರುವುದರ ಜೊತೆಗೆ ಜನಪ್ರಿಯ ನಾಯಕರೂ ಆಗಿರುವುದರಿಂದ ಹೋದೆಡೆಯೆಲ್ಲ ಸಹಜವಾಗೇ ಜನ ಅವರನ್ನು ಸುತ್ತುವರಿದು ಬಿಡುತ್ತಾರೆ. ಭದ್ರತಾ ಸಿಬ್ಬಂದಿ ಇಲ್ಲವೇ ಅಧಿಕಾರಿಗಳು ಅವರಿಗೆ ದಾರಿ ಮಾಡಿಕೊಡಬೇಕಾಗುತ್ತದೆ. ಆದರೆ ನಮಗಿರುವ ಗೊಂದಲ ಅದಲ್ಲ. ಈ ಗಣ್ಯರ ಜೊತೆ ಅಷ್ಟೆಲ್ಲ ಆಧಿಕಾರಿಗಳು, ಭದ್ರತಾ ಸಿಬ್ಬಂದಿ ಇರುತ್ತಾರಲ್ಲ? ಆಫ್ ಕೋರ್ಸ್ ಅವರು ಕೂಡ ಹಸಿದಿರುತ್ತಾರೆ. ಅಂದರೆ ಸಿದ್ದರಾಮಯ್ಯ ಆಗಲೀ, ಶಿವಕುಮಾರ್ ಆಗಲೀ ಅಥವಾ ಬೇರೆ ಯಾವುದೇ ಸಚಿವನಾಗಲೀ; ತಮ್ಮೊಂದಿಗಿರುವ ಜನ-ಅಧಿಕಾರಿ, ಭದ್ರತಾ ಸಿಬ್ಬಂದಿ, ಕಾರ್ಯಕರ್ತರಿಗೂ ಊಟ ಕೊಡಿಸುತ್ತಾರೆಯೇ? ಇದರ ಬಗ್ಗೆಯಂತೂ ಜನಸಾಮಾನ್ಯರಲ್ಲಿ ವಿಪರೀತ ಕುತೂಹಲವಿದೆ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.