ಸಚಿವ ಮುನಿರತ್ನ ನಾಯ್ಡು ವಿರುದ್ಧವೂ ಪೋಸ್ಟರ್ ಅಭಿಯಾನ ಆರಂಭಿಸಿದ ಕಾಂಗ್ರೆಸ್

ಸಚಿವ ಮುನಿರತ್ನ ನಾಯ್ಡು ವಿರುದ್ಧವೂ ಪೋಸ್ಟರ್ ಅಭಿಯಾನ ಆರಂಭಿಸಿದ ಕಾಂಗ್ರೆಸ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 08, 2022 | 10:54 AM

ಉಳಿದ ರೂ.7,000-8,000 ಕೋಟಿ ಎಲ್ಲಿ ಹೋಯಿತು ನ ಅಂತ ಗೆಸ್ ಮಾಡಿ ಅತ್ಯಾಕರ್ಷಕ ಬಹುಮಾನ ಗೆಲ್ಲಿರಿ ಅಂತ ಪೋಸ್ಟರ್ ನಲ್ಲಿ ಮುದ್ರಿಸಲಾಗಿದೆ.

ಬೆಂಗಳೂರು:  ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇಸಿಎಮ್ (PayCM) ಅಂತ ಪೋಸ್ಟರ್ ಅಭಿಯಾನ ನಡೆಸಿದ ಕಾಂಗ್ರೆಸ್ ಈಗ ತೋಟಗಾರಿಗೆ ಖಾತೆ ಸಚಿವ ಮುನಿರತ್ನ ನಾಯ್ಡು (Munirathna Naidu) ವಿರುದ್ಧ ಗೆಸ್ ಅಂಡ್ ವಿನ್ (Guess and Win) ಹೆಸರಲ್ಲಿ ಸಚಿವರನ್ನು ಗುರುತಿಸಿ ಬಹುಮಾನ ನಿಮ್ಮದಾಗಿಸಿಕೊಳ್ಳಿ ಅಂತ ಅಭಿಯಾನ ಆರಂಭಿಸಿದ್ದಾರೆ. ಪೋಸ್ಟರ್ ಸಾರಾಂಶವೇನು ಗೊತ್ತಾ? ರಾಜಾರಾಜೇಶ್ವರಿ ಕ್ಷೇತ್ರದಿಂದ ಮೊದಲು ಕಾಂಗ್ರೆಸ್ ಮತ್ತು ಈಗ ಬಿಜೆಪಿ ಶಾಸಕರಾಗಿರುವ ಮುನಿರತ್ನ 2013 ಇಲ್ಲಿಯವರೆಗೆ ಬೇರೆ ಬೇರೆ ಸರ್ಕಾರಗಳಿಂದ ರೂ.10,000 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದು ಅದರಲ್ಲಿ ಕೇವಲ ರೂ. 2,000-3,000 ಕೋಟಿಯನ್ನು ಮಾತ್ರ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗಿದೆ. ಉಳಿದ ರೂ.7,000-8,000 ಕೋಟಿ ಎಲ್ಲಿ ಹೋಯಿತು ನ ಅಂತ ಗೆಸ್ ಮಾಡಿ ಅತ್ಯಾಕರ್ಷಕ ಬಹುಮಾನ ಗೆಲ್ಲಿರಿ ಅಂತ ಪೋಸ್ಟರ್ ನಲ್ಲಿ ಮುದ್ರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ