ರಾಯಚೂರು: ಅಪಘಾತ ಭೀಕರ ಸ್ವರೂಪದ್ದಾಗಿದ್ದರೂ ತಂದೆ-ಮಕ್ಕಳು ಬದುಕುಳಿದಿರುವುದು ಆಶ್ಚರ್ಯ!
ಕಾರು ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಹಣಮಂತ ಮತ್ತು ಅವರ ಇಬ್ಬರು ಮಕ್ಕಳು 6-7 ಅಡಿಗಳಷ್ಟು ಮೇಲೆ ಹಾರಿ ನೆಲಕ್ಕೆ ಬಿದ್ದು ಉರುಳುತ್ತಾರೆ.
ರಾಯಚೂರು: ಭೀಕರವಾದ ಅಪಘಾತ ಸಂಭವಿಸಿದಾಗ್ಯೂ ಬೈಕ್ ಮೇಲಿದ್ದ ಮೂವರು ಸವಾರರು ಬದುಕುಳಿದಿರುವುದು ಪವಾಡವೇ ಸರಿ. ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯ ರಾಯಚೂರಿನ ಸಿಂಧನೂರು ಪಟ್ಟಣದ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ವೇಗವಾಗಿ ಕಾರು ಓಡಿಸುತ್ತಿದ್ದ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ತನ್ನ ಮುಂದೆ ಹೋಗುತ್ತಿದ್ದ ಬೈಕ್ ಗೆ ಜೋರಾಗಿ ಗುದ್ದಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಹಣಮಂತ ಮತ್ತು ಅವರ ಇಬ್ಬರು ಮಕ್ಕಳು 6-7 ಅಡಿಗಳಷ್ಟು ಮೇಲೆ ಹಾರಿ ನೆಲಕ್ಕೆ ಬಿದ್ದು ಉರುಳುತ್ತಾರೆ. ಮೂವರನ್ನು ಸ್ಥಳೀಯ ಅಸ್ಪತ್ರೆಗೆ ಸೇರಿಸಲಾಗಿದೆ. ಕಾರು ಚಾಲಕನನ್ನು ಸಿಂಧನೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos