ಪ್ರವೀಣ್​ ಕುಟುಂಬದ ನಂತರ ಮಸೂದ್ ಕುಟುಂಬಕ್ಕೂ ಸಾಂತ್ವನ ಹೇಳಿದರು ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 01, 2022 | 12:25 PM

ಈ ಸಂದರ್ಭದಲ್ಲಿ ಮೃತ ಮಸೂದ್ ಸಹೋದರರೊಬ್ಬರು ಕೊಲೆ ಹೇಗೆ ನಡೆಯಿತು ಅಂತ ಮಾಜಿ ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಮಂಗಳೂರು ಪ್ರವಾಸದಲ್ಲಿರುವ ಜೆಡಿ(ಎಸ್) ಧುರೀಣ ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಕಳೆದ ವಾರ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು (Praveen Nettaru) ಅವರ ಮನೆಗೆ ಭೇಟಿ ನೀಡಿದ ಬಳಿಕ ಎರಡು ವಾರಗಳ ಹಿಂದೆ ಕೊಲೆಯಾದ ಮಸೂದ್ (Masood) ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತ ಮಸೂದ್ ಸಹೋದರರೊಬ್ಬರು ಕೊಲೆ ಹೇಗೆ ನಡೆಯಿತು ಅಂತ ಮಾಜಿ ಮುಖ್ಯಮಂತ್ರಿಗಳಿಗೆ ವಿವರಿಸಿದರು.