ದಾವಣಗೆರೆ, ವಿಜಯಪುರ ಮತ್ತು ಬೆಳಗಾವಿ ನಂತರ ಮಲೆನಾಡು ಚಿಕ್ಕಮಗಳೂರಲ್ಲೂ ಮಳೆ! ಜನರಲ್ಲಿ ಹರ್ಷೋಲ್ಲಾಸ

|

Updated on: Apr 12, 2024 | 5:35 PM

ರಾಜ್ಯದ ಅನೇಕ ಕಡೆಗಳಲ್ಲಿ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ನಮ್ಮ ಜೀವ ನದಿಗಳಾದ ಕಾವೇರಿ, ಕೃಷ್ಣೆ, ತುಂಗಭದ್ರಾ, ಭೀಮಾ-ಹೆಚ್ಚು ಕಡಿಮೆ ಎಲ್ಲ ನದಿಗಳಲ್ಲಿ ನೀರಿಲ್ಲ. ರಾಜ್ಯದ ರಾಜಧಾನಿಯಲ್ಲಿ ಸ್ಥಿತಿ ವಿಕೋಪಕ್ಕೆ ಹೋಗಿದೆ, ಜನಕ್ಕೆ ಕುಡಿಯಲು ಸಹ ನೀರು ಸಿಗುತ್ತಿಲ್ಲ. 40-45 ಡಿಗ್ರಿ ಸೆಲ್ಸಿಯಸ್ ತಾಪಮಾನದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸ್ಥಿತಿ ಗಂಭೀರವಾಗಿದೆ.

ಚಿಕ್ಕಮಗಳೂರು: ಬೆಳಗ್ಗೆ ದಾವಣಗೆರೆಯಲ್ಲಿ (Davanagere) ಮಳೆ, ನಂತರ ಬೆಳಗಾವಿ ಮತ್ತು ವಿಜಯಪುರದಲ್ಲೂ ಮಳೆ ಮತ್ತು ಇಲ್ನೋಡಿ ಮಲ್ನಾಡು ಚಿಕ್ಕಮಗಳೂರಲ್ಲಿ (Chikmagalur) ಕೂಡ ಮಳೆಯಾಗುತ್ತಿದೆ. ಬೆಳಗ್ಗೆ ದಾವಣಗೆರೆಯಲ್ಲಿ ಮಳೆಯಾದಾಗಲೇ ಜನರ ಮನಸ್ಸಿಗೆ ತಂಪೆನಿಸಿತ್ತು. ಅದರೆ ಹೊತ್ತು ಮೇಲೇರುತ್ತಿದ್ದಂತೆ ಬೆಳಗಾವಿ ಮತ್ತು ವಿಜಯಪುರದ (Vijayapura) ಕೆಲಭಾಗಗಳಲ್ಲಿ ಮಳೆ ಸುರಿದ ಸುದ್ದಿಗಳು ಲಭ್ಯವಾದವು. ಈಗ್ಗೆ ಸ್ವಲ್ಪ ಹೊತ್ತು ಮುಂಚೆ ಚಿಕ್ಕಮಗಳೂರಲ್ಲಿ ಮಳೆಯಾದ ಸುದ್ದಿ ಸಿಕ್ಕಿದೆ ಮತ್ತು ಟಿವಿ9 ವರದಿಗಾರ ಮಳೆ ಸುರಿಯುತ್ತಿರುವ ದೃಶ್ಯಗಳನ್ನು ಸಹ ಕಳಿಸಿದ್ದಾರೆ. ಇವು ಬಿರು ಬೇಸಿಗೆಯ ದಿನಗಳು ಮಾರಾಯ್ರೇ. ರಾಜ್ಯದ ಅನೇಕ ಕಡೆಗಳಲ್ಲಿ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ನಮ್ಮ ಜೀವ ನದಿಗಳಾದ ಕಾವೇರಿ, ಕೃಷ್ಣೆ, ತುಂಗಭದ್ರಾ, ಭೀಮಾ-ಹೆಚ್ಚು ಕಡಿಮೆ ಎಲ್ಲ ನದಿಗಳಲ್ಲಿ ನೀರಿಲ್ಲ. ರಾಜ್ಯದ ರಾಜಧಾನಿಯಲ್ಲಿ ಸ್ಥಿತಿ ವಿಕೋಪಕ್ಕೆ ಹೋಗಿದೆ, ಜನಕ್ಕೆ ಕುಡಿಯಲು ಸಹ ನೀರು ಸಿಗುತ್ತಿಲ್ಲ. 40-45 ಡಿಗ್ರಿ ಸೆಲ್ಸಿಯಸ್ ತಾಪಮಾನದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲಯಲ್ಲೇ ಎಲ್ಲಾದರೂ ಮಳೆಯಾದ ಸುದ್ದಿ ಬಂದರೆ ಮನಸ್ಸು ಮುದಗೊಳ್ಳುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Weather: ಇಂದಿನಿಂದ ಏಪ್ರಿಲ್​ 18ರವರೆಗೆ ಕರ್ನಾಟಕದ 25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ