Lakshmi Hebbalkar: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಕೇವಲ ಡಿಕೆ ಶಿವಕುಮಾರ್ ಪಾದಮುಟ್ಟಿ ನಮಸ್ಕರಿಸಿದರು!

Lakshmi Hebbalkar: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಕೇವಲ ಡಿಕೆ ಶಿವಕುಮಾರ್ ಪಾದಮುಟ್ಟಿ ನಮಸ್ಕರಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2023 | 1:47 PM

ಇದು ಯಾಕೆ ಆಶ್ಚರ್ಯ ಹುಟ್ಟಿಸುತ್ತದೆ ಅಂದರೆ, ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವಾರು ಬಾರಿ ಸಿದ್ದರಾಮಯ್ಯನವರ ಪಾದಮುಟ್ಟಿ ನಮಸ್ಕರಿಸಿದ್ದನ್ನು ಕನ್ನಡಿಗರು ನೋಡಿದ್ದಾರೆ.

ಬೆಂಗಳೂರು: ಇಂದು ರಾಜಭವನದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಬಸವಣ್ಣ, ಛತ್ರಪತಿ ಶಿವಾಜಿ ಹಾಗೂ ಡಾ ಬಿಆರ್ ಅಂಬೇಡ್ಕರ್ ಅವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಒಂದು ಅಚ್ಚರಿ ಹುಟ್ಟಿಸುವ ಕೆಲಸ ಮಾಡಿದರು. ಮೊದಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot) ಅವರಿಂದ ಅಭಿನಂದನೆ ಸ್ವೀಕರಿಸುತ್ತಾರೆ, ಅವರಿಬ್ಬರ ಪಾದ ಮುಟ್ಟಿ ನಮಸ್ಕರಿಸುವುದಿಲ್ಲ. ಆದರೆ, ಡಿಕೆ ಶಿವಕುಮಾರ್ (DK Shivakumar) ಅವರಿಂದ ಬೋಕೆ ಸ್ವೀಕರಿಸುವ ಮೊದಲು ಅವರು ಉಪ ಮುಖ್ಯಮಂತ್ರಿಗಳ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಇದು ಯಾಕೆ ಆಶ್ಚರ್ಯ ಹುಟ್ಟಿಸುತ್ತದೆ ಅಂದರೆ, ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವಾರು ಬಾರಿ ಸಿದ್ದರಾಮಯ್ಯನವರ ಪಾದಮುಟ್ಟಿ ನಮಸ್ಕರಿಸಿದ್ದನ್ನು ಕನ್ನಡಿಗರು ನೋಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ