Siddaramaiah; ಜನರಿಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸುತ್ತೇವೆ, ವಿರೋಧ ಪಕ್ಷಗಳು ಕೇವಲ ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿವೆ: ಸಿದ್ದರಾಮಯ್ಯ, ಮುಖ್ಯಮಂತ್ರಿ

Siddaramaiah; ಜನರಿಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸುತ್ತೇವೆ, ವಿರೋಧ ಪಕ್ಷಗಳು ಕೇವಲ ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿವೆ: ಸಿದ್ದರಾಮಯ್ಯ, ಮುಖ್ಯಮಂತ್ರಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 27, 2023 | 3:55 PM

ಅವರು ಯಾವ ಟೀಕೆಯಾದರೂ ಮಾಡಲಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸ ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು: ಸಂಪುಟ ವಿಸ್ತರಣೆಯ ನಂತರ ಖುಷಿಯಿಂದ ಬೀಗುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ರಾಜ ಭವನದ ಆವರಣದಲ್ಲಿ ನಡೆಯುತ್ತಾ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದರು. ಸಚಿವ ಸಂಪುಟ ವಿಸ್ತರಣೆ (cabinet expansion) ಅತ್ಯವಶ್ಯಕವಾಗಿತ್ತು, ಎಲ್ಲ ಖಾತೆಗಳಿಗೆ ಸಚಿವರಿದ್ದರೆ ಕೆಲಸ ಮಾಡೋದು ಸುಲಭವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ವಿರೋಧ ಪಕ್ಷಗಳು ಕೇವಲ ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಅವರು ಯಾವ ಟೀಕೆಯಾದರೂ ಮಾಡಲಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸ ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಸಂಪುಟ ವಿಸ್ತರಣೆ ಆದ ವಿಳಂಬವನ್ನು ಬಿಜೆಪಿ ಟೀಕಿಸಿದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪನವರು (BS Yediyurappa) ಮುಖ್ಯಮಂತ್ರಿಯಾಗಿ, ಸಂಪುಟದ ಏಕೈಕ ಪ್ರತಿನಿಧಿಯಾಗಿ ಎಷ್ಟು ದಿನಗಳ ಕಾಲ ಕೆಲಸ ಮಾಡಿದ್ದರು ಅನ್ನೋದು ಅವರಿಗೆ ಮರೆತುಹೋಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ