ಸಿದ್ದರಾಮಯ್ಯ ಸಂಪುಟ ಸಚಿವರಿಗೆ ಖಾತೆಗಳ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

Karnataka cabinet portfolio allocation: ಸಿದ್ದರಾಮಯ್ಯನವರ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಎರಡು ಪ್ರಮುಖ ಖಾತೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಯಾರಿಗೆ ಯಾವ ಖಾತೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಸಿದ್ದರಾಮಯ್ಯ ಸಂಪುಟ ಸಚಿವರಿಗೆ ಖಾತೆಗಳ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ
Follow us
ರಮೇಶ್ ಬಿ. ಜವಳಗೇರಾ
|

Updated on:May 27, 2023 | 4:04 PM

ಬೆಂಗಳೂರು: ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ (Congress) ಹೈಕಮಾಂಡ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದೆ. ಇದರೊಂದಿಗೆ ಹಳಬರು ಹಾಗೂ ಹೊಸಬರನ್ನು ಒಳಗೊಂಡ ಸಿದ್ದರಾಮಯ್ಯನವ ಸರ್ಕಾರದ ಪರಿಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ಇದೀಗ ಯಾರಿಗೆ ಯಾವ ಖಾತೆ? ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ? ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಯಾರಿಗೆ ಯಾವ ಖಾತೆ (Karnataka cabinet portfolio allocation)ಎನ್ನವ  ಪಟ್ಟಿಯೊಂದು ವೈರಲ್ ಆಗಿದೆ. ಇದೀಗ ಯಾರಿಗೆ ಯಾವ ಖಾತೆ ಎಂಬ ಮಾಹಿತಿ ಹೊರಬಿದ್ದಿದ್ದು, ಸರ್ಕಾರ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಹಾಗಾದ್ರೆ, ಯಾರಿಗೆ ಯಾವ ಖಾತೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Siddaramaiah Cabinet:ಸಿದ್ದರಾಮಯ್ಯ ಸಂಪುಟ ಫುಲ್​ ಫಿಲ್: ಅನುಭವಿ- ಉತ್ಸಾಹಿ ತಂಡ ಹೀಗಿದೆ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ನಿರೀಕ್ಷಿಸಿದಂತೆ ಪ್ರಬಲ ಖಾತೆಗಳನ್ನೇ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಡಿಕೆ ಶಿವಕುಮಾರ್​ ತೆಕ್ಕೆಗೆ ಹೋಗಿದೆ. ಪ್ರಮುಖ ಖಾತೆಗಳಲ್ಲಿ ಒಂದಾದ ಇಂಧನ ಖಾತೆಯನ್ನು ಡಿಕೆ ಶಿವಕುಮಾರ್ ಅವರು ತಮ್ಮ ಬಣದ ಸಚಿವ ಕೆಜೆ ಜಾರ್ಜ್ ಅವರಿಗೆ ಕೊಡಿಸುವಲ್ಲಿ ಕೊನೆಗೂ ಸಫಲರಾಗಿದ್ದಾರೆ.

ಯಾರಿಗೆ ಯಾವ ಖಾತೆ?

    • ಸಿದ್ದರಾಮಯ್ಯ , ಸಿಎಂ , ಹಣಕಾಸು, ಗುಪ್ತಚರ ಇಲಾಖೆ
    • ಡಿ.ಕೆ.ಶಿವಕುಮಾರ, ಡಿಸಿಎಂ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ದಿ
    • ಪರಮೇಶ್ವರ್ -ಗೃಹ ಖಾತೆ
    • ಹೆಚ್.ಕೆ.ಪಾಟೀಲ್,- ಕಾನೂನು ಮತ್ತು ಸಂಸದೀಯ
    • ಕೆ.ಹೆಚ್.ಮುನಿಯಪ್ಪ-ಆಹಾರ ಮತ್ತು ನಾಗರಿಕ ಸರಬರಜು
    • ಕೆಜೆ ಜಾರ್ಜ್ -ಇಂಧನ ಖಾತೆ
    • ಎಂ.ಬಿ.ಪಾಟೀಲ್ – ಬೃಹತ್ & ಮಧ್ಯಮ ಕೈಗಾರಿಕೆ, ಐಟಿ ಬಿಟಿ
    • ರಾಮಲಿಂಗಾ ರೆಡ್ಡಿ-ಸಾರಿಗೆ
    • ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್
    • ಜಮೀರ್ ಅಹಮದ್​ ಖಾನ್ – ವಸತಿ ಮತ್ತು ವಕ್ಫ್‌ ಬೋರ್ಡ್
    • ಸತೀಶ್ ಜಾರಕಿಹೊಳಿ -ಲೋಕೋಪಯೋಗಿ ಖಾತೆ
    • ಕೃಷ್ಣ ಭೈರೇಗೌಡ, -ಕಂದಾಯ
    • ಚಲುವರಾಯಸ್ವಾಮಿ -ಕೃಷಿ ಖಾತೆ
    • ವೆಂಕಟೇಶ್, – ಪಶು ಸಂಗೋಪಾನ ಇಲಾಖೆ
    • ಡಾ.ಹೆಚ್.ಸಿ.ಮಹಾದೇವಪ್ಪ -ಸಮಾಜ ಕಲ್ಯಾಣ ಇಲಾಖೆ
    • ಈಶ್ವರ ಖಂಡ್ರೆ – ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ
    • ಕೆ.ಎನ್.ರಾಜಣ್ಣ,-ಸಹಕಾರ
    • ದಿನೇಶ್ ಗುಂಡೂರಾವ್ -, ಆರೋಗ್ಯ ಕುಟಂಬ ಕಲ್ಯಾಣ ಇಲಾಖೆ ಖಾತೆ
    • ಶರಣಬಸಪ್ಪ ದರ್ಶನಾಪುರ, – ಸಣ್ಣ ಕೈಗಾರಿಕೆ ಖಾತೆ
    • ಶಿವಾನಂದ ಪಾಟೀಲ್ -ಜವಳಿ, ಸಕ್ಕರೆ ಖಾತೆ
    • ಆರ್.ಬಿ.ತಿಮ್ಮಾಪುರ, -ಅಬಕಾರಿ, ಮುಜರಾಯಿ ಇಲಾಖೆ
    • ಎಸ್.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂ ವಿಜ್ಞಾನ ಖಾತೆ, ರೇಷ್ಮೆ
    • ಶಿವರಾಜ ತಂಗಡಗಿ, -ಹಿಂದುಳಿದ ವರ್ಗಗಳ ಕಲ್ಯಾಣ, ಎಸ್​​ಟಿ ಕಲ್ಯಾಣ
    • ಡಾ.ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
    • ಮಂಕಾಳು ವೈದ್ಯ, -ಮೀನುಗಾರಿಕೆ, ಬಂದರು ಮತ್ತು ಒಳಾಡಳಿತ ಸಾರಿಗೆ
    • ಲಕ್ಷ್ಮೀ ಹೆಬ್ಬಾಳ್ಕರ್, -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
    • ರಹೀಂ ಖಾನ್- ಪೌರಾಡಳಿತ ಖಾತೆ, ಹಜ್​ ಖಾತೆ
    • ಡಿ.ಸುಧಾಕರ್, -ಮೂಲ ಸೌಕರ್ಯ
    • ಸಂತೋಷ ಲಾಡ್ – ಕಾರ್ಮಿಕ, ಕೌಶಲ್ಯಾಭಿವೃದ್ಧಿ
    • ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
    • ಬಿ.ಎಸ್.ಸುರೇಶ್,-ನಗರಾಭಿವೃದ್ದಿ ಖಾತೆ
    • ಮಧು ಬಂಗಾರಪ್ಪ, -ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
    • ಎಮ್ ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ ಇಲಾಖೆ
    • ಬಿ.ನಾಗೇಂದ್ರ -ಯುವಜನ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಯಾರಿಗೆ ಯಾವ ಖಾತೆ  ಹಂಚಿಕೆ ಕುರಿತು ಸರಕಾರ ಅಧಿಕೃತವಾಗಿ ಇನ್ನೂ ಪಟ್ಟಿ ಪ್ರಕಟಿಸದೆ ಇದ್ದರೂ ಯಾವ ಸಚಿವರಿಗೆ ಯಾವ ಖಾತೆ ಎಂಬ ಮಾಹಿತಿ ಹೊರಬಿದ್ದಿದ್ದು, ಸರಕಾರ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.

Published On - 3:46 pm, Sat, 27 May 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್