ಭರ್ತಿಯಾದ ಸಿದ್ದರಾಮಯ್ಯ ಸಂಪುಟ: ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗಿಲ್ಲ ಮಂತ್ರಿಭಾಗ್ಯ?

ಜಾತಿವಾರು, ಪ್ರಾದೇಶಿಕವಾರು ಸೇರಿದಂತೆ ಕೆಲ ಮಾನದಂಡಗಳ ಆಧಾರದ ಮೇಲೆ ಶಾಸಕರಿಗೆ ಕಾಂಗ್ರೆಸ್​ ಹೈಕಮಾಂಡ್​ ಸಚಿವ ಸ್ಥಾನ ನೀಡಲಾಗಿದೆ. ಆದರೂ ಕರ್ನಾಟಕ ಕೆಲ ಜಿಲ್ಲೆಗಳಿಗೆ ಮಂತ್ರಿಭಾಗ್ಯ ಸಿಕ್ಕಿಲ್ಲ. ಹಾಗಾದ್ರೆ, ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಕ್ಕಿವೆ? ಯಾವ ಜಿಲ್ಲೆಗಿಲ್ಲ? ಎನ್ನುವ ವಿವರ ಇಲ್ಲಿದೆ.

ಭರ್ತಿಯಾದ ಸಿದ್ದರಾಮಯ್ಯ ಸಂಪುಟ: ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗಿಲ್ಲ ಮಂತ್ರಿಭಾಗ್ಯ?
Follow us
ರಮೇಶ್ ಬಿ. ಜವಳಗೇರಾ
|

Updated on: May 27, 2023 | 4:56 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರದ(Congress Government) ಸಂಪುಟ ವಿಸ್ತರಣೆಯಾಗಿದೆ (Karnataka Cabinet expansion).ಇಂದು (ಮೇ 27) ಬೆಂಗಳೂರಿನ (Bengaluru) ರಾಜಭವನದ ಗಾಜಿನಮನೆಯಲ್ಲಿ ಎರಡನೇ ಹಂತದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಒಟ್ಟು 34 ಜನರ ಸಂಪುಟ ರಚನೆಯಾಗಿದೆ. ಸಾಮಾಜಿಕ ನ್ಯಾಯ. ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದೆ. ಹಳಬರು ಹಾಗೂ ಹೊಸಬರನ್ನು ತಂಡ ಸಿದ್ಧಪಡಿಸಿದೆ. ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಕೊಡುವ ದೃಷ್ಟಿಯಿಂದ ಕೆಲವು ಹಿರಿಯರಿಗೆ ಕೊಕ್‌ ನೀಡಲಾಗಿದೆ. ಇನ್ನು ರಾಜ್ಯದ 31 ಜಿಲ್ಲೆಗಳ ಪೈಕಿ ಯಾವ ಜಿಲ್ಲೆಗಳಿಗೆ ಮಾತ್ರವೇ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಕ್ಕಿದೆ?  ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವೆಲ್ಲ ಜಿಲ್ಲೆಗೆ ಮಂತ್ರಿಭಾಗ್ಯವಿಲ್ಲ ಎನ್ನುವ ವಿವರ ಇಲ್ಲಿದೆ ನೋಡಿ.

ಇದನ್ನೂ ಓದಿ: ಸಿದ್ದರಾಮಯ್ಯ ಸಂಪುಟ ಸಚಿವರಿಗೆ ಖಾತೆಗಳ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

ಯಾವ ಜಿಲ್ಲೆಗೆ ಎಷ್ಟು ಮಂತ್ರಿಭಾಗ್ಯ?

ಬೆಂಗಳೂರು ನಗರ ಜಿಲ್ಲೆಗೆ ಆರು ಸಚಿವ ಸ್ಥಾನ ಸಿಕ್ಕಿದ್ದು, ಮೈಸೂರು ಜಿಲ್ಲೆಗೆ ಮೂರು. ಸಿದ್ದರಾಮಯ್ಯ ಜತೆಗೆ ಡಾ ಹೆಚ್​ಸಿ ಮಹಾದೇವಪ್ಪ, ಕೆ.ವೆಂಕಟೇಶ್ ಅವರಿಗೆ ಮಂತ್ರಿಭಾಗ್ಯ ಒಲಿದುಬಂದಿದೆ. ಇನ್ನು ತುಮಕೂರು- (ಕೆಎನ್ ರಾಜಣ್ಣ,  ಡಾ ಜಿ ಪರಮೇಶ್ವರ್) ವಿಜಯಪುರ-(ಶಿವಾನಂದ್ ಪಾಟೀಲ್, ಎಂಬಿ ಪಾಟೀಲ್), ಕಲಬುರಗಿ-(ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್), ಬೀದರ್-(ರಹೀಂ ಖಾನ್, ಈಶ್ವರ್ ಖಂಡ್ರೆ) ಮತ್ತು ಬೆಳಗಾವಿ( ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ) ಜಿಲ್ಲೆಗಳಿಗೆ ತಲಾ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ, 16 ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಸಚಿವ ಸ್ಥಾನ ವಂಚಿತ ಜಿಲ್ಲೆಗಳು

ಉಡುಪಿ(ಕಾಂಗ್ರೆಸ್​ ಗೆದ್ದಿಲ್ಲ), ಮಂಗಳೂರು (ಸ್ಪೀಕರ್ ಸ್ಥಾನ ಸಿಕ್ಕಿದೆ), ಚಿಕ್ಕಮಗಳೂರು, ಚಾಮರಾಜನಗರ (ಡೆಪ್ಯುಟಿ ಸ್ಪೀಕರ್-ಪುಟ್ಟರಂಗಶೆಟ್ಟಿ) ಕೊಡಗು, ಕೋಲಾರ, ಹಾವೇರಿ, ಬೆಂಗಳೂರು ಗ್ರಾಮಾಂತರ, ಹಾಸನ.

ಇನ್ನು ಕೆಲ ಜಿಲ್ಲೆಗಳಗೆ ಸಚಿವ ಸ್ಥಾನ ಸಿಕ್ಕಿಲ್ಲದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಕೊಡಗು, ಹಾವೇರಿ, ಹಾಸನ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಗೆ ಪ್ರಾತಿನಿಧ್ಯ ಲಭಿಸಿಲ್ಲ. ಕೆಲವು ಮಾನದಂಡಗಳನ್ನು ಅನುಸರಿಸುವಾಗ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಉದಾಹರಣೆಗೆ ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ