ವಿಜಯ್ ಶಾ ನಂತರ ಮಧ್ಯಪ್ರದೇಶದ ಡಿಸಿಎಂ ಜಗದೀಶ್ ದೇವ್ಡಾ ಭಾರತೀಯ ಸೇನೆ ಬಗ್ಗೆ ವಿವಾದಾತ್ಮಕ ಹೇಳಿಕೆ!
ಏತನ್ನಧ್ಯೆ, ಹೈಕೋರ್ಟ್ ಆದೇಶದ ಮೇರೆಗೆ ತನ್ನ ವಿರುದ್ಧ ದಾಖಲಾಗಿರುವ ಎಫ್ಐರ್ ರದ್ದು ಕೋರಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೊಕ್ಕಿದ್ದ ವಿಜಯ್ ಶಾಗೆ ಭಾರೀ ಹಿನ್ನಡೆಯಾಗಿದೆ. ಅವರ ಅರ್ಜಿಯ ವಿಚಾರಣೆಯನ್ನು ಅಪೆಕ್ಸ್ ಕೋರ್ಟ್ ಮೇ 19ರವರೆಗೆ ಮುಂದೂಡಿದೆ. ವಿಜಯ್ ಶಾ ಪರವಾಗಿ ಖ್ಯಾತ ವಕೀಲ ಕಪಿಲ್ ಸಿಬಲ್ ವಾದವನ್ನು ಮಂಡಿಸಲಿದ್ದಾರೆ.
ಬೆಂಗಳೂರು, ಮೇ 16: ಮಧ್ಯ ಪ್ರದೇಶದ ಸಚಿವರು ಸಾರ್ವಜನಿಕ ಸಭೆಗಳಲ್ಲಿ ಮಾತಾಡುವಾಗ ತಮ್ಮ ವಿವೇಕವನ್ನು ಬದಿಗಿಟ್ಟಿರುತ್ತಾರೆ ಅನಿಸುತ್ತದೆ. ಅಲ್ಲಿನ ಸಚಿವ ಕುಂವರ್ ವಿಜಯ್ ಶಾ (Kunwar Vijay Shah), ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಗ್ರರ ಸಹೋದರಿ ಅಂತ ಹೇಳಿ ವಿವಾದ ಸೃಷ್ಟಿಸಿದ ಬಳಿಕ ಅದೇ ರಾಜ್ಯದ ಉಪ ಮುಖ್ಯಮಂತ್ರಿ ಜಗದೀಶ್ ದೇವ್ಡಾ ಅನ್ನುವವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಹಿಂದೂಗಳನ್ನು ನಿರ್ದಯತೆಯಿಂದ ಅವರ ಪತ್ನಿ ಮತ್ತು ಮಕ್ಕಳ ಎದುರು ಕೊಂದ ಬಳಿಕ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನ ನುಗ್ಗಿ ಉಗ್ರರನ್ನು ಸದೆಬಡಿದಿದ್ದಾರೆ, ಇಡೀ ದೇಶ ಮತ್ತು ಇಡೀ ಸೇನೆ ಪ್ರಧಾನಿಯವರ ಪಾದಗಳಿಗೆ ನಮಸ್ಕರಿಸುತ್ತಿದೆ ಎಂದು ದೇವ್ಡಾ ಹೇಳಿದ್ದಾರೆ. ಅವರ ಮಾತುಗಳು ವ್ಯಾಪಕ ಖಂಡನೆಗೆ ಗುರಿಯಾಗಿವೆ.
ಇದನ್ನೂ ಓದಿ: ಸಚಿವರು ಜವಾಬ್ದಾರಿಯಿಂದಿರಬೇಕು; ಸೋಫಿಯಾ ಖುರೇಷಿ ಕುರಿತ ವಿವಾದಾತ್ಮಕ ಹೇಳಿಕೆಗೆ ವಿಜಯ್ ಶಾಗೆ ಸುಪ್ರೀಂ ಕೋರ್ಟ್ ತರಾಟೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
