ಬಿಜೆಪಿ ವಿರೋಧಿಸುತ್ತಿರುವುದು ಕುಟುಂಬ ರಾಜಕಾರಣವಲ್ಲ, ವಿರೋಧ ಪಕ್ಷಗಳನ್ನು ಸರ್ವನಾಶ ಮಾಡುವುದು ಅವರ ಹುನ್ನಾರ: ಕುಮಾರಸ್ವಾಮಿ
ಉತ್ತರ ಭಾರತದ ರಾಜಕಾರಣ ಮತ್ತು ದಕ್ಷಿಣ ಭಾರತದ ರಾಜಕಾರಣ ನಡುವೆ ಬಹಳ ವ್ಯತ್ಯಾಸವಿದೆ. ಮುಂಬರುವ ಚುನಾವಣೆಗಳಲ್ಲಿ ಅದು ಅವರಿಗೆ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಕೋಪದಿಂದ ಹೇಳಿದರು.
Devanahalli: ಕುಟುಂಬ ರಾಜಕಾರಣದ ಬಗ್ಗೆ ಸದಾ ಟೀಕಿಸುವ ಬಿಜೆಪಿ ವರಿಷ್ಠರ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ತರಾಟೆಗೆ ತೆಗೆದುಕೊಂಡರು. ದೇವನಹಳ್ಳಿಯಲ್ಲಿ (Devanahalli) ಸುದ್ದಿಗಾರರೊಂದಿಗೆ ಮಾತಾಡಿದ ಅವರು ಬಿಜೆಪಿ ವಿರೋಧ ಮಾಡುತ್ತಿರುವುದು ಕುಟುಂಬ ರಾಜಕಾರಣವಲ್ಲ, ವಿರೋಧ ಪಕ್ಷಗಳ ಸರ್ವನಾಶ. ಅದರೆ, ಉತ್ತರ ಭಾರತದ ರಾಜಕಾರಣ ಮತ್ತು ದಕ್ಷಿಣ ಭಾರತದ ರಾಜಕಾರಣ ನಡುವೆ ಬಹಳ ವ್ಯತ್ಯಾಸವಿದೆ. ಮುಂಬರುವ ಚುನಾವಣೆಗಳಲ್ಲಿ ಅದು ಅವರಿಗೆ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಕೋಪದಿಂದ ಹೇಳಿದರು.