ಪ್ರವೀಣ್ ನೆಟ್ಟಾರು ಹತ್ಯೆ: ಪುತ್ತೂರು ಬಳಿ ಉದ್ರಿಕ್ತ ಜನ ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು

ಪ್ರವೀಣ್ ನೆಟ್ಟಾರು ಹತ್ಯೆ: ಪುತ್ತೂರು ಬಳಿ ಉದ್ರಿಕ್ತ ಜನ ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2022 | 1:00 PM

ಪುತ್ತೂರಿನಿಂದ ಸ್ಟೇಟ್ ಬ್ಯಾಂಕ್ ಕಡೆ ಹೋಗುತ್ತಿದ್ದಾಗ ಬೊಳ್ವಾರು ಬಳಿ ಅದರ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಬಸ್ಸು ಮತ್ತು ಅದರ ಚಾಲಕನನ್ನು ಇಲ್ಲಿ ನೋಡಬಹುದು.

ದಕ್ಷಿಣ ಕನ್ನಡ: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಯಿಂದ ಜನ ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿಡಿಯೋನಲ್ಲಿ ಕಾಣುತ್ತಿರುವ ಬಸ್ಸು ಪುತ್ತೂರು (Puttur) ಡಿಪೋಗೆ ಸೇರಿದ್ದು ಪುತ್ತೂರಿನಿಂದ ಸ್ಟೇಟ್ ಬ್ಯಾಂಕ್ ಕಡೆ ಹೋಗುತ್ತಿದ್ದಾಗ ಬೊಳ್ವಾರು (Bolwaru) ಬಳಿ ಅದರ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಬಸ್ಸು ಮತ್ತು ಅದರ ಚಾಲಕನನ್ನು ಇಲ್ಲಿ ನೋಡಬಹುದು.