Union Budget 2022: ಕೇಂದ್ರ ಬಜೆಟ್ 2022ರಿಂದ ಕೃಷಿ ಕ್ಷೇತ್ರ, ಕೃಷಿಕರ ನಿರೀಕ್ಷೆಗಳೇನು?
ಕೇಂದ್ರ ಬಜೆಟ್ 2022ರಿಂದ ಕೃಷಿಕರು ಹಾಗೂ ಕೃಷಿ ಕ್ಷೇತ್ರದ ನಿರೀಕ್ಷೆಗಳೇನು ಎಂಬ ಬಗ್ಗೆ ವಿಡಿಯೋ ಮಾಹಿತಿ ನಿಮ್ಮೆದುರು ಇದೆ. ಇದರಲ್ಲಿ ಪ್ರಮುಖ ಅಂಕಿ-ಅಂಶಗಳು ಸಹ ಇವೆ.
ಕೊವಿಡ್- 19 ಮೇಲಿನ ಪ್ರಭಾವ ಕೃಷಿ ವಲಯದ ಮೇಲೆ ಅಷ್ಟೇನೂ ಆಗಿಲ್ಲ ಎಂಬುದೇನೋ ನಿಜ. ಆದರೆ ಕೊರೊನಾ ಲಾಕ್ಡೌನ್, ನಿರ್ಬಂಧಗಳಿಂದ ಸಾಗಾಟಕ್ಕೆ ಸಮಸ್ಯೆಯಾಯಿತು. ಈ ಮಧ್ಯೆಯೂ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಅದಕ್ಕಾಗಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ವರ್ಷದಿಂದ ವರ್ಷಕ್ಕೆ ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಹಣ ಮೀಸಲು ಹೀಗೆ ನಾನಾ ಹೆಜ್ಜೆಗಳನ್ನು ಇಡುತ್ತಿದೆ. ಇಷ್ಟಾದರೂ ರೈತರ ಸ್ಥಿತಿ ಸುಧಾರಿಸಿದೆಯಾ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ ಸಕಾರಾತ್ಮಕವಾದ ಉತ್ತರ ಸಿಗುವುದಿಲ್ಲ. ಆರ್ಥಿಕತೆಯ ಚೇತರಿಕೆ ಹಾದಿಯಲ್ಲಿ ಸಾಗುತ್ತಿರುವ ಭಾರತದ ಎದುರು ಈಗ 2022-23ರ ಮಹತ್ತರ ಬಜೆಟ್ ಕಣ್ಣೆದುರು ಇದೆ. ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಸದ್ಯಕ್ಕೆ ಭಾರತದ ವಿವಿಧ ರಾಜ್ಯಗಳ ಕೃಷಿಕರ ಸ್ಥಿತಿ ಹೇಗಿದೆ, ಅವರ ಪರಿಸ್ಥಿತಿ ಏನು, ಸರ್ಕಾರದಿಂದ ಅವರ ನಿರೀಕ್ಷೆಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Agriculture Loan: 2022ರ ಬಜೆಟ್ನಲ್ಲಿ ರೈತರಿಗೆ ನೀಡುವ ಕೃಷಿ ಸಾಲದ ಪ್ರಮಾಣ 18 ಲಕ್ಷ ಕೋಟಿ ರೂ.ಗೆ ಏರಿಕೆ ಸಾಧ್ಯತೆ