Video: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ವಿಮಾನದಿಂದ ಜಂಪ್ ಮಾಡಿದ ಪ್ರಯಾಣಿಕರು

Updated on: Dec 24, 2025 | 8:07 AM

ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ಪ್ರಯಾಣಿಕರು ವಿಮಾನದಿಂದ ಜಂಪ್ ಮಾಡಿರುವ ಘಟನೆ ಕಿಂದು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಏರ್ ಕಾಂಗೋ ವಿಮಾನದ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದೊಳಗೆ ಕಾಯುವಂತಾಗಿತ್ತು. ಪ್ರಯಾಣಿಕರು ಮೆಟ್ಟಿಲುಗಳಿಲ್ಲದೆ ಬೇಸರಗೊಂಡು ಬಾಗಿಲಿನಿಂದ ಸುಮಾರು 5-6 ಅಡಿಯಷ್ಟು ಕೆಳಗೆ ಹಾರಿದ್ದಾರೆ.

ಕಿಂದು, ಡಿಸೆಂಬರ್ 24: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ಪ್ರಯಾಣಿಕರು ವಿಮಾನದಿಂದ ಜಂಪ್ ಮಾಡಿರುವ ಘಟನೆ ಕಿಂದು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಏರ್ ಕಾಂಗೋ ವಿಮಾನದ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದೊಳಗೆ ಕಾಯುವಂತಾಗಿತ್ತು. ಪ್ರಯಾಣಿಕರು ಮೆಟ್ಟಿಲುಗಳಿಲ್ಲದೆ ಬೇಸರಗೊಂಡು ಬಾಗಿಲಿನಿಂದ ಸುಮಾರು 5-6 ಅಡಿಯಷ್ಟು ಕೆಳಗೆ ಹಾರಿದ್ದಾರೆ. ಮಣಿಮಾ ಪ್ರಾಂತ್ಯದಲ್ಲಿರುವ ಕಿಂದು ವಿಮಾನ ನಿಲ್ದಾಣವು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವಿಮಾನಯಾನ ಸಂಸ್ಥೆಯು ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರೂ, ಈ ರೀತಿಯ ಘಟನೆಗಳು ಸಣ್ಣ ವಿಮಾನ ನಿಲ್ದಾಣಗಳಲ್ಲಿನ ಕೊರತೆಯನ್ನು ಒತ್ತಿ ಹೇಳುತ್ತವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ