Video: ಮಾಲ್ನಲ್ಲಿ ಮಾರಾಟಕ್ಕಿಟ್ಟಿದ್ದ ಡಸ್ಟ್ಬಿನ್ ತೆರೆದಾಗ ಅದರೊಳಗಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕ
ಕಾನ್ಪುರದ ಮಾಲ್ ಒಂದರಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಡಸ್ಟ್ಬಿನ್ ಅಲ್ಲಿ ಗುಟ್ಕಾ ಉಗುಳಿರುವುದು ಕಂಡು ಗ್ರಾಹಕರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಡಸ್ಟ್ಬಿನ್ ಮಾಲ್ನ ಎಂಟ್ರೆನ್ಸ್ನಲ್ಲಿರುತ್ತದೆ. ಆದರೆ ಮಾಲ್ ಒಳಗೆ ಇಟ್ಟಿರುವ ಡಸ್ಟ್ಬಿನ್ ಅನ್ನೂ ಬಿಡದೆ ಜನರು ಗುಟ್ಕಾ ಉಗುಳಿರುವುದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಡಿಸ್ಪ್ಲೇಗೆ ಇಟ್ಟಿರುವ ಡಸ್ಟ್ಬಿನ್ ಅನ್ನು ತೆರೆದು ನೋಡಿದಾಗ ಅದರೊಳಗೆ ಇರುವ ಎಂಜಿಲು ನೋಡಿ ಗ್ರಾಹಕ ಹೌಹಾರಿದ್ದಾರೆ.
ಕಾನ್ಪುರ, ಡಿಸೆಂಬರ್ 24: ಕಾನ್ಪುರದ ಮಾಲ್ ಒಂದರಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಡಸ್ಟ್ಬಿನ್ ಅಲ್ಲಿ ಗುಟ್ಕಾ ಉಗುಳಿರುವುದು ಕಂಡು ಗ್ರಾಹಕರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಡಸ್ಟ್ಬಿನ್ ಮಾಲ್ನ ಎಂಟ್ರೆನ್ಸ್ನಲ್ಲಿರುತ್ತದೆ. ಆದರೆ ಮಾಲ್ ಒಳಗೆ ಇಟ್ಟಿರುವ ಡಸ್ಟ್ಬಿನ್ ಅನ್ನೂ ಬಿಡದೆ ಜನರು ಗುಟ್ಕಾ ಉಗುಳಿರುವುದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಡಿಸ್ಪ್ಲೇಗೆ ಇಟ್ಟಿರುವ ಡಸ್ಟ್ಬಿನ್ ಅನ್ನು ತೆರೆದು ನೋಡಿದಾಗ ಅದರೊಳಗೆ ಇರುವ ಎಂಜಿಲು ನೋಡಿ ಗ್ರಾಹಕ ಹೌಹಾರಿದ್ದಾರೆ. 2012–13 ರಿಂದ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಗಂಭೀರ ಆರೋಗ್ಯ ಅಪಾಯಗಳ ಕಾರಣದಿಂದಾಗಿ ಗುಟ್ಕಾವನ್ನು ನಿಷೇಧಿಸಲಾಗಿದೆ, ಆದರೂ ಅಕ್ರಮ ಮಾರಾಟ ಮುಂದುವರೆದಿದೆ. ಸಾಮಾನ್ಯವಾಗಿ 50 ರೂ. ರಿಂದ 500 ರೂ.ವರೆಗೆ ದಂಡ ವಿಧಿಸಲಾಗುತ್ತದೆ ಮತ್ತು ಕೆಲವು ನಗರಗಳಲ್ಲಿ ಹೆಚ್ಚಿನ ದಂಡ ವಿಧಿಸಲಾಗುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

