ರಕ್ಷಿತಾ ತಾಯಿ ಬಳಿ ಮನಸಾರೆ ಕ್ಷಮೆ ಕೇಳಿದ ಧ್ರುವಂತ್
ಧ್ರುವಂತ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸಾಕಷ್ಟು ಸುದ್ದಿ ಆದರು. ರಕ್ಷಿತಾ ಹಾಗೂ ಧ್ರುವಂತ್ ಮಧ್ಯೆ ಸಾಕಷ್ಟು ಕಿತ್ತಾಟ ನಡೆದಿದೆ. ಈಗ ರಕ್ಷಿತಾ ಅವರ ತಾಯಿ ಬಳಿ ಧ್ರುವಂತ್ ಬಳಿ ಕ್ಷಮೆ ಕೇಳಿದ್ದಾರೆ. ಸಂದರ್ಭದ ವಿಡಿಯೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.
ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಮಧ್ಯೆ ಆದ ಕಿರಿಕ್ಗಳು ಒಂದೆರಡಲ್ಲ. ರಕ್ಷಿತಾನ ಅಪ್ರಬುದ್ಧೆ ಎಂದೆಲ್ಲ ಧ್ರುವಂತ್ ಬೈದಿದ್ದು ಇದೆ. ಈಗ ರಕ್ಷಿತಾ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಧ್ರುವಂತ್ ಅವರು ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ‘ಬೆತ್ತ ತರಬೇಕಿತ್ತು’ ಎಂದು ಧ್ರುವಂತ್ ಹೇಳಿದರು. ಆಗ ಗಿಲ್ಲಿ, ‘ಆ ಬೆತ್ತದಲ್ಲಿ ನಿನಗೆ ಹೊಡೆಯುತ್ತಿದ್ದರು’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 24, 2025 09:03 AM

