Gujarat Plane Crash: ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ

Updated on: Jun 13, 2025 | 11:33 AM

ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರೆಲ್ಲ ದುರಂತದಲ್ಲಿ ಮಡಿದರೂ ಕೇವಲ ರಮೇಶ್ ಮಾತ್ರ ಬದುಕುಳಿದಿರುವುದು ಪವಾಡವಲ್ಲದೆ ಮತ್ತೇನೂ ಅಲ್ಲ. 40-ವರ್ಷ ವಯಸ್ಸಿನ ಅವರು ತಮ್ಮ ಸಹೋದರನನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದರಂತೆ. ಸಹೋದರ ಅಜಯ್ ಕುಮಾರ್ ರಮೇಶ್ ಸಹ ಅವರೊಂದಿಗೆ ಇದೇ ವಿಮಾನದಲ್ಲಿ ಲಂಡನ್​ಗೆ ಪ್ರಯಾಣಿಸುತ್ತಿದ್ದರು, ಆದರೆ ಅವರು ಬದುಕುಳಿದಿಲ್ಲ.

ಅಹಮದಾಬಾದ್, ಜೂನ್ 13: ನಿನ್ನೆ ನಗರದಲ್ಲಿ ನಡೆದ ವಿಮಾನ ದುರಂತದಲ್ಲಿ ಎಲ್ಲ ಪ್ರಯಾಣಿಕರು ಸತ್ತರೂ ಒಬ್ಬ ವ್ಯಕ್ತಿ ಮಾತ್ರ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಅವರ ಹೆಸರು ರಮೇಶ್ ವಿಶ್ವಾಸ್​​ಕುಮಾರ್ ಮತ್ತು ಬ್ರಿಟನ್ ದೇಶದ ಪ್ರಜೆ. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಸಿವಿಲ್ ಆಸ್ಪತ್ರೆಗೆ ತೆರಳಿ ರಮೇಶ್ ಮತ್ತು ಗಾಯಗೊಂಡಿರುವ ಇತರ ಜನರನ್ನು ಮಾತಾಡಿಸಿದರು. ರಮೇಶ್ ತಾನು ಹೇಗೆ ಬಚಾವಾದೆ ಅಂತ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ವಿಮಾನ ಅಪ್ಪಳಿಸುವ ವಿಷಯ ಗೊತ್ತಾಗುತ್ತಿದ್ದಂತೆ ರಮೇಶ್ ಎಮರ್ಜೆನ್ಸಿ ಎಕ್ಸಿಟ್ ಓಪನ್ ಮಾಡಿ ಕೆಳಗೆ ಧುಮುಕಿದರಂತೆ. ಅವರು ಹೇಳೋದನ್ನು ಪ್ರಧಾನಿ ಮೋದಿ ಗಮನವಿಟ್ಟು ಕೇಳಿದರು.

ಇದನ್ನೂ ಓದಿ:  Gujarat Plane Crash: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More