‘ಕ್ಲಾಂತ’ ಸಿನಿಮಾ ಕಾರ್ಯಕ್ರಮದಲ್ಲಿ ‘ಕಾಟೇರ’ನ ಗುಣಗಾನ ಮಾಡಿದ ಅಜಯ್ ರಾವ್

|

Updated on: Jan 11, 2024 | 11:03 PM

Kaatera: ಹೊಸಬರ ‘ಕ್ಲಾಂತ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಅಜಯ್ ರಾವ್, ವೇದಿಕೆ ಮೇಲೆ ‘ಕಾಟೇರ’ ಸಿನಿಮಾ ನೆನಪು ಮಾಡಿಕೊಂಡರು.

ಆಕ್ಷನ್ ಥ್ರಿಲ್ಲರ್ ಕತೆ ಒಳಗೊಂಡಿರುವ ‘ಕ್ಲಾಂತ’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಟ್ರೈಲರ್ ಅನ್ನು ನಟ ಅಜಯ್ ರಾವ್ (Ajay Roa) ಹಾಗೂ ಇನ್ನಿತರೆ ಗಣ್ಯರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ‘ಕ್ಲಾಂತ’ ಚಿತ್ರತಂಡಕ್ಕೆ ಶುಭಾಶಯ ಕೋರಿದ ನಟ ಅಜಯ್ ರಾವ್, ವೇದಿಕೆ ಮೇಲೆ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ನೆನಪು ಮಾಡಿಕೊಂಡರು. ‘ಕಾಟೇರ’ ಸಿನಿಮಾ ನೋಡಿದಾಗ, ಅದಕ್ಕೆ ಸಿಗುತ್ತಿರುವ ಜನಮನ್ನಣೆ ನೋಡಿದರೆ ಖುಷಿಯಾಗುತ್ತದೆ. ಚಿತ್ರಮಂದಿರಗಳ ವೈಭವ ಮರಳಿ ಬಂದಂತೆ ಭಾಸವಾಗುತ್ತಿದೆ. ಎಲ್ಲರ ಸಿನಿಮಾಕ್ಕೂ ಅದೇ ರೀತಿಯ ಯಶಸ್ಸು ಸಿಗಲಿ, ಹೊಸಬರ ಸಿನಿಮಾಗಳಿಗೂ ಅದೇ ರೀತಿಯ ಸ್ವಾಗತ ಸಿಗಲಿ ಎಂದರು ಅಜಯ್ ರಾವ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ