ಆಲಮಟ್ಟಿ ಡ್ಯಾಂ ಭರ್ತಿ: ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ

Edited By:

Updated on: Sep 02, 2026 | 9:20 PM

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ, ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂ ಬಹುತೇಕ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿ ಹದಿನೈದು ದಿನಗಳು ಕಳೆದರೂ ಸರ್ಕಾರ, ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಬಾಗಿನ ಅರ್ಪಿಸಲು ಮುಂದಾಗಿಲ್ಲ. ಇದು ಕೃಷ್ಣಾ ನದಿ ಪ್ರದೇಶದ ಜನರಲ್ಲಿ ಅಸಮಾಧಾನ ಮೂಡಿಸಿದ್ದು, ಕಾವೇರಿ ಕಣಿವೆಗೆ ನೀಡುವ ಪ್ರಾಮುಖ್ಯತೆಯನ್ನು ಕೃಷ್ಣೆಗೆ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ವಿಜಯಪುರ, ಸೆ.2: ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟೆ (ಆಲಮಟ್ಟಿ ಡ್ಯಾಂ) ಭರ್ತಿಯಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆ ಮತ್ತು ಬರಗಾಲವಿದ್ದರೂ, ನೆರೆಯ ಮಹಾರಾಷ್ಟ್ರದ ಮಹಾಬಳೇಶ್ವರ, ಸಾತಾರ, ಸಾಂಗ್ಲಿ, ಕೊಲ್ಲಾಪುರ ಇನ್ನಿತರ ಭಾಗಗಳಲ್ಲಿ ಸುರಿದ ಉತ್ತಮ ಮಳೆಯಿಂದ ಡ್ಯಾಂ ಬಹುತೇಕ ಪೂರ್ಣಗೊಂಡಿದೆ. 519.60 ಮೀಟರ್ ಎತ್ತರದ ಜಲಾಶಯದಲ್ಲಿ ಪ್ರಸ್ತುತ 519.58 ಮೀಟರ್ ನೀರು ಸಂಗ್ರಹವಾಗಿದ್ದು, ಕೇವಲ 0.02 ಮೀಟರ್ ಮಾತ್ರ ಭರ್ತಿಗೆ ಬಾಕಿ ಇದೆ. ಡ್ಯಾಂ ಭರ್ತಿಯಾಗಿ ಹತ್ತು-ಹದಿನೈದು ದಿನಗಳು ಕಳೆದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಾಗಿನ ಅರ್ಪಿಸಲು ಮುಂದಾಗಿಲ್ಲ ಎಂಬುದು ಕೃಷ್ಣಾ ನದಿ ಪಾತ್ರದ ಜನರ ಆಕ್ಷೇಪ. ಕಾವೇರಿ ಕಣಿವೆಗೆ ನೀಡುವ ಪ್ರಾಮುಖ್ಯತೆಯನ್ನು ಕೃಷ್ಣಾ ಕಣಿವೆಗೆ ನೀಡುತ್ತಿಲ್ಲ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಭಾಗದ ರೈತರು ಹಾಗೂ ಜನಸಾಮಾನ್ಯರು, ಮುಖ್ಯಮಂತ್ರಿಗಳು ಆಗಮಿಸಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸುವಂತೆ ಒತ್ತಾಯಿಸಿದ್ದಾರೆ. ಬರಗಾಲದ ಕುರಿತು ರೈತರ ಅಹವಾಲುಗಳನ್ನು ಸ್ವೀಕರಿಸಲು ಬಾಗಿನ ಅರ್ಪಣೆ ಉತ್ತಮ ನೆಪ ಎಂದು ರೈತಪರ ಸಂಘಟನೆಗಳು ತಿಳಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us