ಪ್ರವಾಸಿ ತಾಣದಲ್ಲಿ ಇದೆಂಥಾ ಅನಾಚಾರ: ಜಲಪಾತದ ಬಳಿ ಪ್ರವಾಸಿಗರ ಎಣ್ಣೆ ಪಾರ್ಟಿ!

| Updated By: ಗಂಗಾಧರ​ ಬ. ಸಾಬೋಜಿ

Updated on: Jun 22, 2024 | 3:47 PM

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸೂರಮನೆ ಜಲಪಾತಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇದೇ ಸ್ಥಳದಲ್ಲಿ ಕೆಲ ಪ್ರವಾಸಿಗರು ಇತರರಿಗೆ ಮುಜುಗರವಾಗುವ ತರಹ ಜಲಪಾತದ ಪಕ್ಕದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪ್ರವಾಸಿಗರ ಮೆಚ್ಚಿನ ತಾಣದಲ್ಲಿ ಇದೆಂಥಾ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತವಾಗಿದೆ. ಪೊಲೀಸರನ್ನ ನಿಯೋಜನೆಗೆ ಒತ್ತಾಯಿಸಲಾಗಿದೆ.

ಚಿಕ್ಕಮಗಳೂರು, ಜೂನ್​ 22: ಸದ್ಯ ಎಲ್ಲೆಡೆ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ನಿಸರ್ಗ ಹಚ್ಚ ಹಸಿರಿನಿಂದ ಕೂಡಿದೆ. ಪ್ರವಾಸಿ ತಾಣಗಳು ಪ್ರವಾಸಿಗರನ್ನು (tourists) ಕೈಬೀಸಿ ಕರೆಯುತ್ತಿವೆ. ಆದರೆ ಇದೇ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೆಲ ಅನಾಚಾರಗಳು ನಡೆಯುತ್ತಿವೆ. ಜಲಪಾತದ ಪಕ್ಕದಲ್ಲೇ ಪ್ರವಾಸಿಗರು ಮದ್ಯ ಸೇವಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಆ ಮೂಲಕ ಪ್ರವಾಸಿಗರ ಮೆಚ್ಚಿನ ತಾಣದಲ್ಲಿ ಇದೆಂಥಾ ಸಂಸ್ಕೃತಿ ಎಂಬು ಪ್ರಶ್ನೆ ಮೂಡಿದೆ. ಕಳಸ ತಾಲೂಕಿನ ಸೂರಮನೆ ಜಲಪಾತದ ಬಳಿ ಈ ಘಟನೆ ಕಂಡುಬಂದಿದೆ. ಜಲಪಾತದ ಪಕ್ಕದಲ್ಲೇ ಕೂತು ಪ್ರವಾಸಿಗರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪ್ರವಾಸಿಗರ ವರ್ತನೆ ಕಂಡು ಫ್ಯಾಮಿಲಿ ಟೂರಿಸ್ಟ್​ಗಳಿಗೆ ಕಿರಿ-ಕಿರಿ ಉಂಟಾಗಿದೆ. ಕಳಸ-ಹೊರನಾಡ ಬಹುತೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ಸ್ಥಳಗಳಲ್ಲಿ ಒಂದು. ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತವಾಗಿದೆ. ವೀಕೆಂಡ್​ನಲ್ಲಿ ಪೊಲೀಸರನ್ನ ನಿಯೋಜನೆ ಮಾಡುವಂತೆ ಪ್ರವಾಸಿಗರ ಒತ್ತಾಯಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jun 22, 2024 03:47 PM