ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ‘ನ್ಯಾಚುರಲ್ ಅಲಯನ್ಸ್’ ಎಂದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ!
2008 ರಿಂದ ಇಲ್ಲಿಯವರೆಗೆ ಬಿಜೆಪಿ ಜೊತೆ ಹೊಂದಾಣಿಕೆ ಮುಂದುವರಿದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುತಿತ್ತು ಎನ್ನುತ್ತೀರಿ. ಆದರೆ ಸರ್, ರಾಜ್ಯದಲ್ಲಿ ವಿನಾಶದ ಅಂಚು ತಲುಪಿದ್ದು ಜೆಡಿಎಸ್ ಅಂತ ಬೇರೆ ಗ್ರಹಗಳ ಜೀವಿಗಳಿಗೂ ಗೊತ್ತು. ಸ್ವಂತ ಸಾಮರ್ಥ್ಯದಲ್ಲಿ ಸರ್ಕಾರ ರಚಿಸುತ್ತೇನೆ ಅಂತ ಹೇಳುತ್ತಿದ್ದ ನೀವು ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಹೌದು ತಾನೇ?
ಬೆಂಗಳೂರು: ರಾಜಕಾರಣವೆಂದರೆ ಇದೇ ಇರಬೇಕು. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಹಿಂದೆ ತಮ್ಮಿಂದ ನಡೆದ ಪ್ರಮಾದಗಳನ್ನೂ ಬೇರೆಯವರ ಮೇಲೆ ಜಾರಿಸುತ್ತಾರೆ! 2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟು ಸಮ್ಮಿಶ್ರ ಸರ್ಕಾರ (coalition government) ಅಸ್ತಿತ್ವಕ್ಕೆ ಬಂದಾಗ ಮೊದಲ 20 ತಿಂಗಳು ಕಾಲ ಕುಮಾರಸ್ವಾಮಿ ಮತ್ತು ನಂತರದ 20 ತಿಂಗಳು ಕಾಲ ಬಿಎಸ್ ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾಗುವ ಒಡಂಬಡಿಕೆ ಎರಡು ಪಕ್ಷಗಳ ನಡುವೆ ಆಗಿತ್ತು. ಆದರೆ, ಮೊದಲ 20 ತಿಂಗಳು ಅಧಿಕಾರ ಅನುಭವಿಸಿದ ಕುಮಾರಸ್ವಾಮಿ ತಮ್ಮ ಅವಧಿ ಪೂರ್ತಿಗೊಳ್ಳುತ್ತಿದ್ದಂತೆಯೇ ಒಪ್ಪಂದ ಮುರಿದು ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದರು. ಇವತ್ತು ಕುಮಾರಸ್ವಾಮಿ ಬೇರೆಯವರ ಕುತಂತ್ರದಿಂದ ಹಾಗಾಗಿತ್ತು ಅನ್ನುತ್ತಾರೆ! ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಬೇರೆಯವರ ಮಾತು ಕೇಳಿದ್ರಾ? ಕನ್ನಡಿಗರ ಕಿವಿ ಮೇಲೆ ಇಡೋದು ಬೇಡ ಕುಮಾರಸ್ವಾಮಿಯವರೇ.
ಬಿಜೆಪಿಯಿಂದ ದೂರವಾದ ಬಳಿಕ ಮೊನ್ನಿನವರೆಗೆ ಆ ಪಕ್ಷದ ನಾಯಕರನ್ನು ಕೋಮುವಾದಿಗಳು ಅಂತ ಹೀಯಾಳಿಸುತ್ತಿದ್ದ ನೀವು ಈಗ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ‘ನ್ಯಾಚುರಲ್ ಅಲಯನ್ಸ್’ ಎನ್ನುತ್ತೀರಿ! 2008 ರಿಂದ ಇಲ್ಲಿಯವರೆಗೆ ಬಿಜೆಪಿ ಜೊತೆ ಹೊಂದಾಣಿಕೆ ಮುಂದುವರಿದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುತಿತ್ತು ಎನ್ನುತ್ತೀರಿ. ಆದರೆ ಸರ್, ರಾಜ್ಯದಲ್ಲಿ ವಿನಾಶದ ಅಂಚು ತಲುಪಿದ್ದು ಜೆಡಿಎಸ್ ಅಂತ ಬೇರೆ ಗ್ರಹಗಳ ಜೀವಿಗಳಿಗೂ ಗೊತ್ತು. ಸ್ವಂತ ಸಾಮರ್ಥ್ಯದಲ್ಲಿ ಸರ್ಕಾರ ರಚಿಸುತ್ತೇನೆ ಅಂತ ಹೇಳುತ್ತಿದ್ದ ನೀವು ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಹೌದು ತಾನೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕಕ್ಕೆ ಟೆಸ್ಲಾ ಎಂಟ್ರಿ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ