AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಜೆಪಿಯ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ

ಸಿಜೆಪಿಯ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ

ಸುಷ್ಮಾ ಚಕ್ರೆ
|

Updated on: Oct 09, 2026 | 7:59 PM

Share

"ಕೆಲವು ದೇಶವಿರೋಧಿ ಶಕ್ತಿಗಳು ಜನರನ್ನು ದಾರಿ ತಪ್ಪಿಸುವ ಮೂಲಕ ನಮ್ಮ ದೇಶದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಬಯಸುತ್ತಿವೆ. ರಾಷ್ಟ್ರದ ವಾತಾವರಣವನ್ನು ಕೆಡಿಸಲು ದೊಡ್ಡ ಸಂಚು ರೂಪಿಸಲಾಗುತ್ತಿದೆ. ಅಕ್ಟೋಬರ್ 10ರಂದು ಪ್ರತಿಭಟನೆಯಲ್ಲಿ ಭಾಗವಹಿಸಲು ಕರೆ ನೀಡಿರುವ ರಾಜಕೀಯ ಪಕ್ಷಗಳು ಮತ್ತು ಅವರು ಸರ್ಕಾರವನ್ನು ವಿರೋಧಿಸಲು ಜನರನ್ನು ಕರೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನಾನು ಎಲ್ಲಾ ಮುಸ್ಲಿಮರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನಾವು ಯಾರದ್ದೋ ಸ್ವಾರ್ಥಕ್ಕಾಗಿ ಬಳಕೆಯಾಗುವ ದಾಳಗಳಲ್ಲ ಎಂಬುದು ನೆನಪಿರಲಿ" ಎಂದು ಇಲ್ಯಾಸಿ ಹೇಳಿದ್ದಾರೆ.

ನವದೆಹಲಿ, ಅಕ್ಟೋಬರ್ 9: ದೆಹಲಿಯಲ್ಲಿ ಶನಿವಾರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿರುವ ಪ್ರತಿಭಟನಾ ಪ್ರದರ್ಶನದಿಂದ ದೂರವಿರಲು ಪ್ರಮುಖ ಮುಸ್ಲಿಂ ನಾಯಕರು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷರಾದ ಡಾ. ಇಮಾಮ್ ಉಮರ್ ಅಹಮದ್ ಇಲ್ಯಾಸಿ ವಿಡಿಯೋ ಸಂದೇಶ ನೀಡಿದ್ದು, “ನಮ್ಮ ಪ್ರೀತಿಯ ದೇಶದಲ್ಲಿ ಉದ್ವಿಗ್ನತೆ, ಅಶಾಂತಿ ಅಥವಾ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯಾವುದೇ ಪ್ರತಿಭಟನೆ, ಧರಣಿ ಅಥವಾ ಸಭೆ-ಸಮಾರಂಭಗಳಲ್ಲಿ ಭಾಗವಹಿಸಬೇಡಿ” ಎಂದು ಎಲ್ಲಾ ಮುಸ್ಲಿಮರನ್ನು ಕೋರಿದ್ದಾರೆ.

“ಕೆಲವು ದೇಶವಿರೋಧಿ ಶಕ್ತಿಗಳು ಜನರನ್ನು ದಾರಿ ತಪ್ಪಿಸುವ ಮೂಲಕ ನಮ್ಮ ದೇಶದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಬಯಸುತ್ತಿವೆ. ರಾಷ್ಟ್ರದ ವಾತಾವರಣವನ್ನು ಕೆಡಿಸಲು ದೊಡ್ಡ ಸಂಚು ರೂಪಿಸಲಾಗುತ್ತಿದೆ. ಅಕ್ಟೋಬರ್ 10ರಂದು ಪ್ರತಿಭಟನೆಯಲ್ಲಿ ಭಾಗವಹಿಸಲು ಕರೆ ನೀಡಿರುವ ರಾಜಕೀಯ ಪಕ್ಷಗಳು ಮತ್ತು ಅವರು ಸರ್ಕಾರವನ್ನು ವಿರೋಧಿಸಲು ಜನರನ್ನು ಕರೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನಾನು ಎಲ್ಲಾ ಮುಸ್ಲಿಮರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನಾವು ಯಾರದ್ದೋ ಸ್ವಾರ್ಥಕ್ಕಾಗಿ ಬಳಕೆಯಾಗುವ ದಾಳಗಳಲ್ಲ ಎಂಬುದು ನೆನಪಿರಲಿ” ಎಂದು ಇಲ್ಯಾಸಿ ಹೇಳಿದ್ದಾರೆ.

“ಇಂದಿನವರೆಗೂ ಮುಸ್ಲಿಮರಾದ ನಮ್ಮನ್ನು ಕೇವಲ ಬಳಸಿಕೊಳ್ಳಲಾಗಿದೆ. ಇದು ಅತ್ಯಂತ ಧೈರ್ಯ ಮತ್ತು ವಿವೇಕದಿಂದ ವರ್ತಿಸಬೇಕಾದ ಸಮಯ. ಕೇವಲ ಭಾವೋದ್ವೇಗದಿಂದ ತೆಗೆದುಕೊಳ್ಳುವ ನಿರ್ಧಾರಗಳು ಅಪರೂಪಕ್ಕೆ ಮಾತ್ರ ಸರಿಯಾಗುತ್ತವೆ. ಧೈರ್ಯದಿಂದ ಕೆಲಸ ಮಾಡಿ, ಏಕೆಂದರೆ ವಿವೇಕಯುತ ನಿರ್ಧಾರಗಳು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತವೆ. ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಬಳಸಿಕೊಂಡಿವೆ. ಹಿಂದಿನ ಪ್ರತಿಭಟನೆಗಳ ಸಮಯದಲ್ಲಿಯೂ ನಾನು ಮನವಿ ಮಾಡಿದ್ದೆ. ಅನೇಕರು ಅದನ್ನು ಆಲಿಸಿದರು, ಇನ್ನು ಕೆಲವರು ಭಾಗವಹಿಸಿದರು. ಅವರು ಇಂದಿಗೂ ಜೈಲಿನಲ್ಲಿದ್ದಾರೆ. ಅವರ ಇಡೀ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಅವರಿಗೆ ಜಾಮೀನು ಕೊಡಿಸಲು ಯಾರೂ ಇಲ್ಲ. ಆದ್ದರಿಂದ, ಯಾವುದೇ ರಾಜಕೀಯ ಪಕ್ಷದ ದಾರಿತಪ್ಪಿಸುವ ಮಾತಿಗೆ ಮರುಳಾಗಬೇಡಿ ಮತ್ತು ಈ ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ. ಇದರಲ್ಲಿ ನಮಗೆ ಯಾವುದೇ ಲಾಭವಿಲ್ಲ. ಈ ರಾಜಕೀಯ ಪಕ್ಷಗಳು ತಮ್ಮ ಸ್ವಂತ ಲಾಭಕ್ಕಾಗಿ ನಮ್ಮನ್ನು ಬಳಸಿಕೊಳ್ಳಲು ಬಯಸುತ್ತವೆ. ನೀವು ಹೋಗಬಾರದು, ನಿಮ್ಮ ಮಕ್ಕಳನ್ನೂ ಕಳುಹಿಸಬಾರದು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More