ಬಿಜೆಪಿ ರಾಜ್ಯ ಘಟಕದಲ್ಲಿ ಬಣಗಳಿಲ್ಲ, ಬಂಡಾಯವಿಲ್ಲ; ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ: ಬಿ ಶ್ರೀರಾಮುಲು

ಅರುಣ್​ ಕುಮಾರ್​ ಬೆಳ್ಳಿ

Updated on: Feb 27, 2025 | 3:16 PM

ನೀವು ವಿಜಯೇಂದ್ರರ ಬಣವೋ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಪಾಟೀಲ್ ಬಣವೋ ಅಂತ ಕೇಳಿದರೆ ಶ್ರೀರಾಮುಲು ಅವರು ತಾನು ಬಿಜೆಪಿ ಬಣ ಎನ್ನುತ್ತಾರೆ. ಬಸನನಗೌಡ ಯತ್ನಾಳ್ ಅವರಿಗೆ ಪಕ್ಷದ ಯಾವ ನಾಯಕನೊಂದಿಗೂ ವೈಮನಸ್ಸಿಲ್ಲ, ಅವರು ಪಕ್ಷದ ಒಳಿತಿಗಾಗಿ ಹೋರಾಡುತ್ತಿದ್ದಾರೆ, ಅವರದ್ದೊಂದು ಪ್ರತ್ಯೇಕ ಟೀಮಿದೆ ಅಂತ ಹೇಳುವುದು ತಪ್ಪು ಎಂದು ಶ್ರೀರಾಮುಲು ಹೇಳಿದರು.

ಮೈಸೂರು: ಮಾಜಿ ಸಚಿವ ಬಿ ಶ್ರೀರಾಮುಲು  ಅವರು ಹೇಳುವ ಪ್ರಕಾರ ರಾಜ್ಯ ಬಿಜೆಪಿ ಘಟಕದಲ್ಲಿ ಬಂಡಾಯವಿಲ್ಲ, ಬಣಗಳಿಲ್ಲ. ಪಕ್ಷವೆಂದ ಮೇಲೆ ನಾಯಕರ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳಿರುತ್ತವೆ, ಅವುಗಳನ್ನು ನಾಯಕರೇ ಸರಿಮಾಡಿಕೊಳ್ಳುತ್ತಾರೆ, ಪಾರ್ಟಿ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಮತ್ತು ಸಂಘಟನಾತ್ಮಕವಾಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಶ್ರೀರಾಮುಲು (Sriramulu) ಹೇಳಿದರು. ರಾಜ್ಯದ ನಾಯಕರಿಗೆ ಸಾಧ್ಯವಾಗದ ಸಮಸ್ಯೆಗಳನ್ನು ವರಿಷ್ಠರು ಬಗೆಹರಿಸುತ್ತಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಶ್ರೀರಾಮುಲು ಜೊತೆಗೆ 50 ಶಾಸಕರನ್ನು ಸಂಪರ್ಕಿಸಿದ್ದೆ; ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.