‘ರೈತ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಎಲ್ಲಾ ಪಕ್ಷದ ರಾಜಕೀಯ ನಾಯಕರು; ಹಾಡಿನ ವಿಶೇಷತೆಗಳನ್ನು ತಿಳಿಸಿದ ‘ಆಲ್ ಓಕೆ’

| Updated By: shivaprasad.hs

Updated on: Feb 24, 2022 | 5:45 AM

All Ok | Raitha Song: ‘ಆಲ್​ ಓಕೆ’ ಹೊಸ ಹಾಡು ‘ರೈತ’ ಗುರುವಾರ ರಿಲೀಸ್ ಆಗುತ್ತಿದೆ. ಹಾಡಿನ ಕುರಿತು ಟಿವಿ9ನೊಂದಿಗೆ ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಅಲೋಕ್.

‘ಆಲ್ ಓಕೆ’ (All Ok) ಎಂದೇ ಗುರುತಿಸಿಕೊಂಡಿರುವ ಕನ್ನಡದ ಪ್ರಸಿದ್ಧ ಗಾಯಕ, ರ್ಯಾಪರ್ ಅಲೋಕ್ ಗುರುವಾರ ಅಂದರೆ ಇಂದು ಹೊಸ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. ‘ರೈತ’ (Raitha Song) ಎಂದು ಶೀರ್ಷಿಕೆಯಿರುವ ಈ ನೂತನ ಹಾಡು ಯುಟ್ಯೂಬ್​ನಲ್ಲಿ ತೆರೆಕಾಣಲಿದೆ. ಟಿವಿ9 ಜತೆ ಮಾತನಾಡುತ್ತಾ ರೈತ ಹಾಡಿನ ವಿಶೇಷವನ್ನು ಅಲೋಕ್ ವಿವರಿಸಿದ್ದಾರೆ.

ಅಲೋಕ್ ಹಾಡುಗಳ ವಿಶೇಷವೆಂದರೆ ಅದರಲ್ಲಿ ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಗಣ್ಯರು ಕಾಣಿಸಿಕೊಳ್ಳುತ್ತಾರೆ. ಇದೀಗ ಹೊಸ ಹಾಡಿನಲ್ಲೂ ಈ ಪರಂಪರೆ ಮುಂದುವರೆದಿದೆ. ‘ರೈತ’ ಹಾಡಿನ ಸೌಂದರ್ಯವೆಂದರೆ ಇದರಲ್ಲಿ ಎಲ್ಲಾ ಪಕ್ಷದ ನಾಯಕರಿದ್ದಾರೆ. ಎಲ್ಲರಿಗೂ ರೈತರ ಮೇಲೆ ಪ್ರೀತಿಯಿದೆ. ಅವರವರ ಸರ್ಕಾರ ಇದ್ದಾಗ ಎಲ್ಲರೂ ಕೆಲಸ ಮಾಡಿದವರೇ. ನಿಜ ಜೀವನದಲ್ಲೂ ಕೃಷಿಕರಾಗಿ ಗುರುತಿಸಿಕೊಂಡಿರುವ ನಟ ಕಿಶೋರ್ ಕೂಡ ಹಾಡಿನಲ್ಲಿದ್ದಾರೆ. ಈ ಎಲ್ಲರಿಗಿಂತಲೂ ಹಾಡಿನಲ್ಲಿ ಇರುವ ದೊಡ್ಡ ಸೂಪರ್ ಸ್ಟಾರ್ ಎಂದರೆ ಅದು ರೈತ. ಕಾರಣ ಅವರ ಅನ್ನ ತಿಂದೇ ಎಲ್ಲರೂ ಬೆಳೆದವರು ಎಂದಿದ್ದಾರೆ ಅಲೋಕ್.

ಹಾಡುಗಳ ಕುರಿತು ಮಾತನಾಡುತ್ತಾ ಅವರು ಪುನೀತ್ ರಾಜ್​ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ‘ಯಾಕಿಂಗೆ 2’ ತನಕದ ಎಲ್ಲಾ ಹಾಡುಗಳನ್ನು ಅಪ್ಪು ಅವರಿಗೆ ಕೇಳಿಸಿದ್ದೆ ಎಂದಿರುವ ಅಲೋಕ್, ‘ರೈತ’ ಗೀತೆಯನ್ನು ಕೇಳಿಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರ್ಯಾಪ್​ಗಳು ಜನರಿಗೆ ಅರ್ಥವಾಗುವಂತಿರಬೇಕು. ಕೇಳುಗನಿಗೆ ಇಂಪಾಗಿರಬೇಕು ಎಂದು ಪುನೀತ್ ಯಾವಾಗಲೂ ಹೇಳುತ್ತಿದ್ದರು. ತಮ್ಮ ಗೀತೆಗಳನ್ನು ಮೆಚ್ಚಿಕೊಂಡಿದ್ದರು ಎಂದು ಅಲೋಕ್ ಸ್ಮರಿಸಿದ್ದಾರೆ.

ಇದನ್ನೂ ಓದಿ:

‘ಆಲ್ ಓಕೆ’ ಹಾಡುಗಳನ್ನು ಕೇಳಿ ಪುನೀತ್ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಅಲೋಕ್ ಹಂಚಿಕೊಂಡ್ರು ಕುತೂಹಲಕರ ವಿಚಾರ

ಮಗುವನ್ನು ದತ್ತು ಪಡೆಯಲು ಯೋಚಿಸಿದ್ದ ಆರ್​ಜೆ ರಚನಾ; ಗೆಳತಿಯ ಕುರಿತು ನೆನಪುಗಳನ್ನು ಹಂಚಿಕೊಂಡ ರ‍್ಯಾಪಿಡ್ ರಶ್ಮಿ