‘ಆಲ್ ಓಕೆ’ ಹಾಡುಗಳನ್ನು ಕೇಳಿ ಪುನೀತ್ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಅಲೋಕ್ ಹಂಚಿಕೊಂಡ್ರು ಕುತೂಹಲಕರ ವಿಚಾರ

All Ok | Puneeth Rajkumar: ಕನ್ನಡದ ಖ್ಯಾತ ರ್ಯಾಪರ್ ‘ಆಲ್ ಓಕೆ’ ಅಲೋಕ್ ಅವರ ಹೊಸ ಗೀತೆ ‘ರೈತ’ ಫೆ.24ರಂದು ಜನರ ವೀಕ್ಷಣೆಗೆ ಲಭ್ಯವಾಗಲಿದೆ. ಇದರ ಕುರಿತು ಅವರು ಟಿವಿ9ಗೆ ಮಾಹಿತಿ ನೀಡುತ್ತಾ, ಪುನೀತ್ ಜತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

TV9kannada Web Team

| Edited By: shivaprasad.hs

Feb 23, 2022 | 7:08 PM

‘ಆಲ್​ ಓಕೆ’ (All Ok) ಎಂದೇ ಗುರುತಿಸಿಕೊಂಡಿರುವ ಅಲೋಕ್ (Alok) ಅವರ ಹೊಸ ಆಲ್ಬಂ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ತಮ್ಮ 15ನೇ ವರ್ಷದ ಜರ್ನಿಯ ವಿಶೇಷವಾಗಿ ರೈತರ ಕುರಿತಾದ ಆಲ್ಬಂ ಗೀತೆಯನ್ನು ತಯಾರಿಸಲಾಗಿದೆ. ಫೆಬ್ರವರಿ 24ರಿಂದ ಅದು ಕೇಳುಗರಿಗೆ ಲಭ್ಯವಿರಲಿದೆ. ರೈತ ರಾಷ್ಟ್ರದ ಬೆನ್ನೆಲುಬಾಗಿದ್ದು, ಆತ ಬೆಳೆದ ಆಹಾರವನ್ನು ಪ್ರತಿಯೊಬ್ಬರು ತಿನ್ನೋದು. ಹಾಗಾಗಿ ರೈತನೇ ಎಲ್ಲರಿಗಿಂತಲೂ ಮುಖ್ಯ ಎಂದಿರುವ ಅಲೋಕ್, ಟಿವಿ9 ಜತೆಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಅವರು ಪುನೀತ್ ರಾಜ್​ಕುಮಾರ್ (Puneeth Rajkumar) ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ. ‘ಯಾಕಿಂಗೆ 2’ ತನಕದ ಎಲ್ಲಾ ಹಾಡುಗಳನ್ನು ಅಪ್ಪು ಅವರಿಗೆ ಕೇಳಿಸಿದ್ದೆ ಎಂದಿರುವ ಅಲೋಕ್, ‘ರೈತ’ ಗೀತೆಯನ್ನು ಕೇಳಿಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರ್ಯಾಪ್​ಗಳು ಜನರಿಗೆ ಅರ್ಥವಾಗುವಂತಿರಬೇಕು. ಕೇಳುಗನಿಗೆ ಇಂಪಾಗಿರಬೇಕು ಎಂದು ಪುನೀತ್ ಯಾವಾಗಲೂ ಹೇಳುತ್ತಿದ್ದರು. ತಮ್ಮ ಗೀತೆಗಳನ್ನು ಮೆಚ್ಚಿಕೊಂಡಿದ್ದರು ಎಂದು ಅಲೋಕ್ ನೆನಪು ಮಾಡಿಕೊಂಡಿದ್ದಾರೆ.

ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್​​ನಲ್ಲಿ ಅಲೋಕ್ ಪಾತ್ರ ಮಾಡಿದ್ದಾರೆ. ಅದನ್ನು ಅವರು ಇಂದು ರಿವೀಲ್ ಮಾಡಿದ್ದಾರೆ. ಆ ಚಿತ್ರಕ್ಕೆ ಚೇತನ್ ಕುಮಾರ್ ಅವರಿಗೆ ಧನ್ಯವಾದ ಹೇಳಬೇಕು. ಸಣ್ಣ ಪಾತ್ರದಲ್ಲಿ ನಟಿಸಿದ್ದೇನೆ. ಆದರೆ ಅದು ಅದೃಷ್ಟವೋ, ದುರಾದೃಷ್ಟವೋ ತಿಳಿಯುತ್ತಿಲ್ಲ. ಕಾರಣ, ನನ್ನ ಮೊದಲ ಆಲ್ಬಂ ಲಾಂಚ್ ಮಾಡಿದ್ದ ಪುನೀತ್ ಅವರು. ಅವರ ಕೊನೆಯ ಚಿತ್ರದಲ್ಲಿ ನಾನು ಸಣ್ಣ ಪಾತ್ರದಲ್ಲಿ ನಟಿಸಿದ್ದೇನೆ. ‘ಜೇಮ್ಸ್​’ನಲ್ಲಿ ಅಪ್ಪು ಜತೆ ನಟಿಸಿದೆ ಎನ್ನುವ ಹೆಮ್ಮೆ ಇದೆ. ಆದರೆ ಅವರಿಲ್ಲ ಎನ್ನುವ ನೋವೂ ಇದೆ ಎಂದಿದ್ದಾರೆ ಅಲೋಕ್.

ಇದನ್ನೂ ಓದಿ:

‘ಆರಾಮ್ ಅರವಿಂದ್ ಸ್ವಾಮಿ’ ಆದ ನಮ್​ ಗಣಿ ಅಭಿಷೇಕ್​; ‘ಗಜಾನನ ಆ್ಯಂಡ್​ ಗ್ಯಾಂಗ್​’ ​ನಿರ್ದೇಶಕನ ಹೊಸ ಚಿತ್ರ

NBK107: ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ ‘ಮಫ್ತಿ’? ಕುತೂಹಲ ಮೂಡಿಸಿದ ‘ಎನ್​ಬಿಕೆ107’ ಪೋಸ್ಟರ್

Follow us on

Click on your DTH Provider to Add TV9 Kannada