ಟಾಕ್ಸಿಕ್ ರಿಲೀಸ್​; ಬೆಂಗಳೂರು ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ

Updated on: Aug 26, 2026 | 9:23 AM

ಟಾಕ್ಸಿಕ್ ಸಿನಿಮಾ ನೋಡಿದ ಅಭಿಮಾನಿಗಳು ಥಿಯೇಟರ್ ಎದುರು ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದರು. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ‘ಟಾಕ್ಸಿಕ್’ ಚಿತ್ರಕ್ಕೆ ಅಭಿಮಾನಿಗಳು ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ. 

‘ಟಾಕ್ಸಿಕ್’ ಸಿನಿಮಾ ಅದ್ದೂರಿಯಾಗಿ ಇಂದು ಬಿಡುಗಡೆ ಆಗಿದೆ. ಈ ಚಿತ್ರವನ್ನು ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಸಿನಿಮಾ ನೋಡಿದ ಫ್ಯಾನ್ಸ್ ಸಾಕಷ್ಟು ಸಂಭ್ರಮಿಸುತ್ತಾ ಇದ್ದಾರೆ. ಥಿಯೇಟರ್​​ನಲ್ಲಿ ಸಿನಿಮಾ ನೋಡಿದ ಫ್ಯಾನ್ಸ್ ಹರ್ಷೋದ್ಘಾರ ಮುಗಿಲುಮುಟ್ಟಿದೆ. ಇನ್ನು, ‘ಟಾಕ್ಸಿಕ್’ ಸಿನಿಮಾನ ವೆಲ್​ಕಮ್ ಮಾಡಲು ಫ್ಯಾನ್ಸ್ ಥಿಯೇಟರ್​ ಬಳಿ ಸಾಕಷ್ಟು ಪ್ಲ್ಯಾನ್ ಮಾಡಿಕೊಂಡಿದ್ದರು. ಸಾಕಷ್ಟು ಕಟೌಟ್​​ಗಳನ್ನು ಹಾಕಿದ್ದಾರೆ. ಅಲ್ಲದೆ, ವಿವಿಧ ಪೋಸ್ಟರ್ ಹಿಡಿದು ಯಶ್ ಅಭಿಮಾನಿಗಳು ಥಿಯೇಟರ್​ಗೆ ಆಗಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಾಕ್ಸಿಕ್​ ಸಿನಿಮಾ ರಿಲೀಸ್​ ಲೈವ್​ ಅಪ್ಡೇಟ್ಸ್​ಗೆ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More