Gruesome accident near T Narasipura: ಅಪಘಾತ ಸಂಭವಿಸುವ ಮೊದಲು ಸೆಲ್ಫೀ ತೆಗೆದುಕೊಂಡ ಸಂಗನಕಲ್ ದುರ್ದೈವಿಗಳ ಮುಖದಲ್ಲಿ ಪ್ರೇತಕಳೆ ಕಾಣದು!

Gruesome accident near T Narasipura: ಅಪಘಾತ ಸಂಭವಿಸುವ ಮೊದಲು ಸೆಲ್ಫೀ ತೆಗೆದುಕೊಂಡ ಸಂಗನಕಲ್ ದುರ್ದೈವಿಗಳ ಮುಖದಲ್ಲಿ ಪ್ರೇತಕಳೆ ಕಾಣದು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 29, 2023 | 7:20 PM

ಇವು ನಮ್ಮ ಬದುಕಿನ ಕೊನೆ ಕ್ಷಣಗಳು ಅಂತ ಅವರಲ್ಲಿ ಒಬ್ಬರಿಗೂ ಅನಿಸಿರಲಿಕ್ಕಿಲ್ಲ. ಸಾವು ಆಕಸ್ಮಿಕ, ಅನಿರೀಕ್ಷಿತ ಮತ್ತು ಕ್ರೂರಿ

ಮೈಸೂರು: ದೇವರ ಆಟ ಬಲ್ಲವರ‍್ಯಾರು, ಅತನ ಎದುರು ನಿಲ್ಲುವರ‍್ಯಾರು… ‘ಅವಳ ಹೆಜ್ಜೆ’ ಚಿತ್ರದ ಎಸ್ ಜಾನಕಿ (S Janaki) ಹಾಡಿರುವ ಗೀತೆಯನ್ನು ನೀವು ಕೇಳಿರುತ್ತೀರಿ. ಈ ಫೋಟೋಗಳನ್ನು ನೋಡಿದರೆ ಆ ಹಾಡು ನೆನಪಾಗುತ್ತದೆ. ಜಿಲ್ಲೆಯ ಕುರುಬೂರು ಬಳಿ ಇಂದು ಸಾಯಂಕಾಲ ನಡೆದ ಭೀಕರ ರಸ್ತೆ ಅಪಘಾತದಲ್ಲಿ (gruesome road accident) ಬಲಿಯಾದವರು ಜನ ಇವರು. ಅಪಘಾತ ನಡೆಯವ ಸ್ಪಲ್ಪ ಸಮಯ ಮೊದಲು ತೆಗೆದುಕೊಂಡ ಪೋಟೋ ಮತ್ತು ಸೆಲ್ಫೀಗಳಿವು. ಇವು ನಮ್ಮ ಬದುಕಿನ ಕೊನೆ ಕ್ಷಣಗಳು ಅಂತ ಅವರಲ್ಲಿ ಒಬ್ಬರಿಗೂ ಅನಿಸಿರಲಿಕ್ಕಿಲ್ಲ. ಸಾವು ಆಕಸ್ಮಿಕ, ಅನಿರೀಕ್ಷಿತ ಮತ್ತು ಕ್ರೂರಿ. ಇವರೆಲ್ಲ ಬಳ್ಳಾರಿ ತಾಲೂಕಿನ ಸಂಗನಕಲ್ಲು (Sanganakal) ನಿವಾಸಿಗಳು, ಮೈಸೂರಿಗೆ ಟ್ರಿಪ್ ಅಂತ ಬಂದಿದ್ದರಂತೆ. ಸತ್ತವರು ಹೆಸರು ಹೀಗಿವೆ: ಬಿಳ್ಯಾಳ ಮಂಜುನಾಥ(35), ಪೂರ್ಣಿಮಾ(30), ಪವನ್(10), ಕಾರ್ತಿಕ್(8), ಸಂದೀಪ್(24), ಸುಜಾತಾ(40), ಕೊಟ್ರೇಶ್(45). ಗಾಯತ್ರಿ(35), ಶ್ರಾವ್ಯ(3), ಕಾರು ಚಾಲಕ ಆದಿತ್ಯ(26). ಗಂಭೀರವಾಗಿ ಗಾಯಗೊಂಡಿರುವವರು ಜನಾರ್ದನ(40), ಪುನೀತ್(4) ಮತ್ತು ಶಶಿಕುಮಾರ್(24).

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ