ಲಕ್ಷ್ಮಣ ಸವದಿ ಮಾತ್ರವಲ್ಲ, ದೇಶ ಮುಖ್ಯವೆಂಬ ಧೋರಣೆ ಉಳ್ಳವರೆಲ್ಲ ಬಿಜೆಪಿ ಸೇರಬೇಕು: ಸಿಟಿ ರವಿ
ದೇಶ ಈಗ ನಿರ್ಣಾಯಕ ಹಂತದಲ್ಲಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭವ್ಯ ಭಾರತದ ನಿರ್ಮಾಣಕ್ಕೆ ಬೀಜಾಂಕರವಾಗಿದೆ, ಅದನ್ನು ವಟ ವೃಕ್ಷವಾಗಿ ಬೆಳೆಸಲು ಸಮಾನಮನಸ್ಕರೆಲ್ಲ ಪ್ರಧಾನಿಯವರೊಂದಿಗೆ ಕೈ ಜೋಡಿಸಬೇಕು ಎಂದು ರವಿ ಹೇಳಿದರು.
ಬಳ್ಳಾರಿ: ನಿನ್ನೆ ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಅವರಿಗೆ ಆತಿಥೇಯರಾಗಿದ್ದ ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ಇಂದು ಪಕ್ಷದ ಕೆಲಸಗಳಿಗಾಗಿ ಬಳ್ಳಾರಿಗೆ ಅಗಮಿಸಿದ್ದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯವರನ್ನು ಬಿಜೆಪಿಗೆ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸವದಿ ಅವರು ಮಾತ್ರವಲ್ಲ, ಎಲ್ಲಕ್ಕಿಂತ ಮೊದಲು ದೇಶಮುಖ್ಯ ಎಂಬ ಮನೋಭಾವ ಇಟ್ಟಿಕೊಂಡವರೆಲ್ಲ ಬಿಜೆಪಿಗೆ ಬರಬೇಕು ಎಂದರು. ತಮ್ಮ ಸ್ವಾರ್ಥ, ಅಧಿಕಾರದ ಮೋಹ, ಸ್ವಜನ ಪಕ್ಷಾಪಾತ ಮೊದಲಾದವುಗಳನ್ನು ಮೀರಿ ದೇಶ ಮುಖ್ಯ ಅನ್ನುವವರು ಬೇರೆ ಪಕ್ಷಗಳಲ್ಲೂ ಇರಬಹುದು, ಅವರೆಲ್ಲ ಬಿಜೆಪಿ ಸೇರಬೇಕೆಂದು ಕರೆ ನೀಡುವುದಾಗಿ ರವಿ ಹೇಳಿದರು. ದೇಶ ಈಗ ನಿರ್ಣಾಯಕ ಹಂತದಲ್ಲಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭವ್ಯ ಭಾರತದ ನಿರ್ಮಾಣಕ್ಕೆ ಬೀಜಾಂಕರವಾಗಿದೆ, ಅದನ್ನು ವಟ ವೃಕ್ಷವಾಗಿ ಬೆಳೆಸಲು ಸಮಾನಮನಸ್ಕರೆಲ್ಲ ಪ್ರಧಾನಿಯವರೊಂದಿಗೆ ಕೈ ಜೋಡಿಸಬೇಕು ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ