‘ನನಗೂ ಅಂಬರೀಷ್ ಬೈಯ್ದಿದ್ದರು’: ಆ ದಿನಗಳನ್ನು ನೆನಪಿಸಿಕೊಂಡ ನಟ ತಬಲಾ ನಾಣಿ
‘ಅಂಬರೀಷ್ ಅವರದ್ದು ಕಲ್ಮಶ ಇಲ್ಲದ ಹೃದಯ. ಭೂಮಿ ಚೆನ್ನಾಗಿ ಇದ್ದರೆ ಬೆಳೆ ಚೆನ್ನಾಗಿ ಇರುತ್ತದೆ. ಮನುಷ್ಯ ತನ್ನ ಹೃದಯ ಚೆನ್ನಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿಯೇ ಅಂಬರೀಷ್ ಅವರು ಎಲ್ಲರ ನೆನಪಿನಲ್ಲಿ ಉಳಿದುಕೊಂಡಿದ್ದಾರೆ’ ಎಂದಿರುವ ನಟ ತಬಲಾ ನಾಣಿ ಅವರು ಒಂದು ಹಳೇ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ‘ಅಪ್ಪ ಐ ಲವ್ ಯೂ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತಾಡಿದ್ದಾರೆ.
ನಟ ತಬಲಾ ನಾಣಿ (Tabla Nani) ಅವರು ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಅಪ್ಪ ಐ ಲವ್ ಯೂ’ (Appa I Love You) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತಬಲಾ ನಾಣಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ‘ರೆಬೆಲ್ ಸ್ಟಾರ್’ ಅಂಬರೀಷ್ (Ambareesh) ಕುರಿತ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ಅಂಬರೀಷ್ ಅವರು ಬೈಯುತ್ತಲೇ ಮಾತು ಶುರು ಮಾಡುತ್ತಾರೆ ಅಂತ ಜನ ಹೇಳ್ತಾರೆ. ನಾನು ಕೂಡ ಅವರಿಂದ ಬೈಯ್ಯಿಸಿಕೊಂಡಿದ್ದೆ. ಅವರ ಮಾತು ಬೈಗುಳದ ರೀತಿ ಇರುವುದಿಲ್ಲ. ಕಲಾವಿದರ ಸಂಘದ ಒಂದು ಕಾರ್ಯಕ್ರಮದಲ್ಲಿ ನಾನು ಮತ್ತು ನಟ ಮಿತ್ರ ಅವರು ಊಟ ಮಾಡದೆಯೇ ಹೋಗುತ್ತಿದ್ದೆವು. ಅದು ಅಂಬರೀಷ್ ಅವರ ಗಮನಕ್ಕೆ ಬಂತು. ಏಯ್ ತಬಲಾ… ಬನ್ರೋ ಇಲ್ಲಿ. ಅವನು ಯಾವನೋ ಕುಳ್ಳ.. ಅವನ್ನನ್ನೂ ಕರೆಯೋ ಇಲ್ಲಿ. ಮುಚ್ಕೊಂಡು ಊಟ ಮಾಡಿಕೊಂಡು ಹೋಗ್ರೋ ಅಂತ ಅವರು ಹೇಳಿದರು. ನಾವು ಮರುಮಾತಾಡದೇ ಸೈಡ್ನಲ್ಲಿ ಬಂದು ಊಟ ಮಾಡಿಕೊಂಡು ಹೋದ್ವಿ’ ಎಂದು ಆ ದಿನವನ್ನು ತಬಲಾ ನಾಣಿ ನೆನಪು ಮಾಡಿಕೊಂಡಿದ್ದಾರೆ. ‘ಅಂಬರೀಷ್ ಅವರದ್ದು ಕಲ್ಮಶ ಇಲ್ಲದ ಹೃದಯ. ಭೂಮಿ ಚೆನ್ನಾಗಿ ಇದ್ದರೆ ಬೆಳೆ ಚೆನ್ನಾಗಿ ಇರುತ್ತದೆ. ಮನುಷ್ಯ ತನ್ನ ಹೃದಯ ಚೆನ್ನಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿಯೇ ಅಂಬರೀಷ್ ಅವರು ಎಲ್ಲರ ನೆನಪಿನಲ್ಲಿ ಉಳಿದುಕೊಂಡಿದ್ದಾರೆ’ ಎಂದಿದ್ದಾರೆ ತಬಲಾ ನಾಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ