ಬಿಜೆಪಿ ಜೊತೆ ಮೈತ್ರಿ ಪಕ್ಷದ ತಿರ್ಮಾನವಲ್ಲ, ಅದಕ್ಕೆ ನನ್ನ ಸಹಮತವಿಲ್ಲ: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ
ಕೋರ್ ಕಮಿಟಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಣೆ ಮಾಡಿದ ಬಳಿಕ ಮೈತ್ರಿಯ ಬಗ್ಗೆ ಚರ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು, ಆದರೆ ಕಮಿಟಿ ಪ್ರವಾಸ ಆರಂಭಿಸುವ ಮೊದಲೇ ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆಗಿಳಿದರು ಎಂದು ಇಬ್ರಾಹಿಂ ಹೇಳಿದರು. ಅಕ್ಟೋಬರ್ 16ರಂದು ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಬಹಳ ಬೇಸರ ಮಾಡಿಕೊಂಡಿದ್ದಾರೆ ಮತ್ತು ತನ್ನನ್ನು ಕತ್ತಲೆಯಲ್ಲಿಟ್ಟು ಬಿಜೆಪಿ ಮೈತ್ರಿ ಬೆಳೆಸಿರುವುದಕ್ಕೆ (alliance with BJP) ನೋವಲ್ಲಿದ್ದಾರೆ. ಮೈತ್ರಿ ಮಾತುಕತೆ ನಡೆಯುವಾಗ ಮತ್ತು ನಂತರದ ಕೆಲದಿನಗಳವರೆಗೆ ಅಜ್ಞಾತವಾಸ ಇಬ್ರಾಹಿಂ ಇವತ್ತು ಮಾಧ್ಯಮಗಳ ಮುಂದೆ ಬಂದು ತಮ್ಮ ಯಾತನೆ ಮತ್ತು ಮಾನಸಿಕ ತುಮುಲ ತೋಡಿಕೊಂಡರು. ಅಲ್ಪಸಂಖ್ಯಾತರು ತಮ್ಮ ಕೈಹಿಡಿಯಲಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಕುಮಾರಸ್ವಾಮಿ (HD Kumaraswamy) ಇದ್ದಾರೆ. ಆದರೆ ವಾಸ್ತವ ಸಂಗತಿಯೇನೆಂದರೆ 2018 ರಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಪರ ಮತ ಚಲಾಯಿಸಿರಲೇ ಇಲ್ಲ ಆದರೆ ಈ ಬಾರಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ವೋಟು ನೀಡಿದ್ದಾರೆ, ಜೆಡಿಎಸ್ ಪಕ್ಷದ ನಿಷ್ಠಾವಂತ ಮತ್ತು ಮೂಲ ಮತದಾರರು ಈ ಸಲ ಕಾಂಗ್ರೆಸ್ ಮತ ನೀಡಿದರು, ಇದನ್ನು ಕುಮಾರಸ್ವಾಮಿ ಒಪ್ಪಿಕೊಳ್ಳುವುದಿಲ್ಲ ಎಂದು ಇಬ್ರಾಹಿಂ ಬೇಸರದಿಂದ ಹೇಳಿದರು.
ಬಿಜೆಪಿ ಜೊತೆ ಮೈತ್ರಿ ಖಂಡಿತವಾಗಿಯೂ ಪಕ್ಷದ ತೀರ್ಮಾನವಲ್ಲ, ವಿಷಯ ಯಾವುದೇ ಆಗಿರಲ, ಮೊದಲು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು, ನಿರ್ಣಯ ಪಾಸಾಗಬೇಕು, ಮಿನಿಟ್ಸ್ ಅಗಬೇಕು, ಸದಸ್ಯರೆಲ್ಲರ ಸಹಿ ಬೀಳಬೇಕು ಮತ್ತು ಕೊನೆಯಲ್ಲಿ ರಾಜ್ಯಾಧ್ಯಕ್ಷನಾದ ತಾನು ಅನುಮೋದನೆ ನೀಡುವ ಹಾಗೆ ಸಹಿ ಹಾಕಿದ ಮೇಲೆ ತೆಗೆದುಕೊಂಡ ನಿರ್ಣಯ ಪಕ್ಷದ ತೀರ್ಮಾನ ಅನಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಕೋರ್ ಕಮಿಟಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಣೆ ಮಾಡಿದ ಬಳಿಕ ಮೈತ್ರಿಯ ಬಗ್ಗೆ ಚರ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು, ಆದರೆ ಕಮಿಟಿ ಪ್ರವಾಸ ಆರಂಭಿಸುವ ಮೊದಲೇ ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆಗಿಳಿದರು ಎಂದು ಇಬ್ರಾಹಿಂ ಹೇಳಿದರು. ಅಕ್ಟೋಬರ್ 16ರಂದು ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ