ಗೊಂದಲದ ಗೂಡಾಗಿರುವ ಬಿಜೆಪಿಗೆ ಜೆಡಿಎಸ್ ಜೊತೆಯ ಮೈತ್ರಿ ಅದನ್ನು ಇನ್ನಷ್ಟು ಹೆಚ್ಚಿಸಿದೆ: ಕೃಷ್ಣ ಭೈರೇಗೌಡ, ಸಚಿವ
ಹಾಲಿ ಬಿಜೆಪಿ ಸಂಸದರಿರುವ ಸ್ಥಾನಗಳು ತನಗೆ ಬೇಕು ಅಂತ ಅದರ ನಾಯಕರು ಕೇಳುತ್ತಿದ್ದಾರೆ. ಮಂಡ್ಯ ಮತ್ತು ಕೋಲಾರದಲ್ಲಿ ಬಿಜೆಪಿ ಸಂಸದರಿದ್ದಾರೆ, ಅಲ್ಲಿ ತಾವು ಸ್ಪರ್ಧಿಸುತ್ತೇವೆ ಅಂತ ಅವರು ಹೇಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ವಿರುದ್ಧ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೆದರುತ್ತಿದ್ದಾರೆ ಎಂದು ಭೈರೇಗೌಡ ಹೇಳಿದರು.
ಮಂಗಳೂರು: ಬಿಜೆಪಿಯಲ್ಲಿ ಆಂತರಿಕ ಗೊಂದಲಗಳು (internal dilemma) ಸಾಕಷ್ಟಿರುವಾಗ ಜೆಡಿಎಸ್ ಪಕ್ಷ ಅದರೊಂದಿಗೆ ಸೇರಿ ಗೊಂದಲಗಳನ್ನು ದ್ವಿಗುಣಗೊಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ನಂತರರ ಅದನ್ನು ತಡೆಹಿಡಿದಿದೆ. ಪಕ್ಷದಲ್ಲಿರುವ ಗೊಂದಲ ಅರ್ಥಮಾಡಿಕೊಳ್ಳಲು ಇಷ್ಟು ಸಾಕು ಎಂದ ಭೈರೇಗೌಡ, ಮೊನ್ನೆಯವರೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರಿಗೆ ಟಿಕೆಟ್ ಸಿಗಲಿದೆಯೋ ಇಲ್ಲವೋ ಅಂತ ಯಾರಿಗೂ ಗೊತ್ತಿಲ್ಲ. ಅವರೊಬ್ಬರೇ ಅಂತಲ್ಲ ಬಿಜೆಪಿಯ ಹಾಲಿ 27 ಸಂಸದರ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆಗಳೆದ್ದಿವೆ. ಇವರಲ್ಲಿ ಯಾರೊಬ್ಬರಿಗೂ ರಾಜ್ಯದ ಬಗ್ಗೆ ಕಾಳಜಿ ಇರಲಿಲ್ಲ. ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಅವರು ಒಮ್ಮೆಯೂ ಧ್ವನಿಯೆತ್ತಲಿಲ್ಲ, ಹಾಗಾಗಿ ಅವರಿಂದ ರಾಜ್ಯಕ್ಕೆ ನಯಾಪೈಸೆಯಷ್ಟು ಲಾಭವಾಗಿಲ್ಲ ಎಂದು ಭೈರೇಗೌಡ ಹೇಳಿದರು. ಜನತಾ ದಳ ಸೃಷ್ಟಿಸುತ್ತಿರುವ ಗೊಂದಲ ಹೇಗಿದೆ ನೋಡಿ. ಹಾಲಿ ಬಿಜೆಪಿ ಸಂಸದರಿರುವ ಸ್ಥಾನಗಳು ತನಗೆ ಬೇಕು ಅಂತ ಅದರ ನಾಯಕರು ಕೇಳುತ್ತಿದ್ದಾರೆ. ಮಂಡ್ಯ ಮತ್ತು ಕೋಲಾರದಲ್ಲಿ ಬಿಜೆಪಿ ಸಂಸದರಿದ್ದಾರೆ, ಅಲ್ಲಿ ತಾವು ಸ್ಪರ್ಧಿಸುತ್ತೇವೆ ಅಂತ ಅವರು ಹೇಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ವಿರುದ್ಧ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೆದರುತ್ತಿದ್ದಾರೆ ಎಂದ ಭೈರೇಗೌಡ, ಕರ್ನಾಟಕದ ಉಳಿದ ಕ್ಷೇತ್ರಗಳಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಮಾರ್ಚ್ 11 ರ ನಂತರ ಬಿಡುಗಡೆಯಾಗಲಿದೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರಕ್ಕೆ ಡಿಕೆ ಸುರೇಶ್ ವಿರುದ್ಧ ಬಿಜೆಪಿಯಿಂದ ಯಾರು? ಕೆಲ ಅಚ್ಚರಿ ಸಂಗತಿ ಬಿಚ್ಚಿಟ್ಟ ಯೋಗೇಶ್ವರ್