Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಶೇ. 28ರಷ್ಟು ಮಳೆ ಕೊರತೆ, 195 ತಾಲೂಕು ಬರಪೀಡಿತ- ಹಿಂಗಾರು ಮಳೆಯೂ ಕಡಿಮೆಯೇ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಆತಂಕ

 Revenue Minister Krishna Byregowda -ಕರ್ನಾಟಕದಲ್ಲಿ ಶೇ. 28ರಷ್ಟು ಮಳೆ ಕೊರತೆ, 195 ತಾಲೂಕುಗಳು ಬರಪೀಡಿತ- ಹಿಂಗಾರು ಮಳೆಯೂ ಕಡಿಮೆಯೇ: ಕಂದಾಯ ಸಚಿವ ಕೃಷ್ಣ ಭೈರೇಗೌಡ ನೀಡಿದರು ಆತಂಕಕಾರಿ ಮಾಹಿತಿ

ಕರ್ನಾಟಕದಲ್ಲಿ ಶೇ. 28ರಷ್ಟು ಮಳೆ ಕೊರತೆ, 195 ತಾಲೂಕು ಬರಪೀಡಿತ- ಹಿಂಗಾರು ಮಳೆಯೂ ಕಡಿಮೆಯೇ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಆತಂಕ
ಶೇ. 28ರಷ್ಟು ಮಳೆ ಕೊರತೆ, 195 ತಾಲೂಕುಗಳು ಬರಪೀಡಿತ- ಹಿಂಗಾರು ಮಳೆಯೂ ಕಡಿಮೆಯೇ
Follow us
ಪ್ರಸನ್ನ ಗಾಂವ್ಕರ್​
| Updated By: ಸಾಧು ಶ್ರೀನಾಥ್​

Updated on: Oct 05, 2023 | 4:25 PM

ಬೆಂಗಳೂರು, ಅಕ್ಟೋಬರ್​ 5: ಹಿಂಗಾರು ಮಳೆಯೂ (Karnataka rains) ಕಡಿಮೆಯಾಗಲಿದ್ದು, ಕರ್ನಾಟಕ ರಾಜ್ಯವು ಪ್ರಸಕ್ತ ಸಾಲಿನಲ್ಲಿ ಬಹುತೇಕ ಬರಗಾಲ ಎದುರಿಸುತ್ತಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು (Revenue Minister Krishna Byregowda) ರಾಜ್ಯದಲ್ಲಿ ಬರಗಾಲದ (Drought) ಹಾಲಿ ಸ್ಥಿತಿ ಮತ್ತು ಅದಕ್ಕೆ ಹಾಲಿ ಕಾಂಗ್ರೆಸ್​​ ಸರ್ಕಾರ ತೆಗೆದುಕೊಂಡಿರುವ ನೀತಿ ನಿರ್ಧಾರಗಳ ಬಗ್ಗೆ ವಿಧಾನಸೌಧದಲ್ಲಿಂದು ಸುದ್ದಿಗಾರರ ಎದುರು ಮಾಹಿತಿ ಹಂಚಿಕೊಂಡರು.

ಕರ್ನಾಟಕದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ಕೇಂದ್ರ ಕೇಳಿದ ಎಲ್ಲಾ ಅಂಕಿ ಅಂಶಗಳನ್ನು ನಾವು ಕೊಟ್ಟಿದ್ದೇವೆ. ವರದಿ ಬಗ್ಗೆ ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಬಳಿ 4,800 ಕೋಟಿ ಪರಿಹಾರ ಕೇಳಿದ್ದೇವೆ. ಮಾರ್ಗಸೂಚಿ ಪ್ರಕಾರ ಇಷ್ಟೇ ಪರಿಹಾರ ಕೇಳಲು ಆಗುವುದು. ನಮಗಿಂತ ಬೇರೆ ರಾಜ್ಯಗಳಲ್ಲೂ ಅಧಿಕ ಮಳೆ ಕೊರತೆ ಆಗಿದೆ. ಆದ್ರೆ ನಾವು‌ ಮಾತ್ರ ಬರಪೀಡಿತ ತಾಲೂಕು ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸ ಇದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಈ ಬಾರಿ ರಾಜ್ಯದಲ್ಲಿ ನಮಗೆ ಆಹಾರ ಕೊರತೆ ಆಗುತ್ತೆ. ಯಾವುದು ಎಷ್ಟು ಅಂತ ಲೆಕ್ಕ ಹಾಕುತ್ತಿದ್ದೇವೆ. ಹಿಂಗಾರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ರಾಜ್ಯದಲ್ಲಿ ೨೮ % ಮಳೆ ಕೊರತೆಯಾಗಿದೆ. ನಾವು ಕೊಟ್ಟ ಬರದ ವರದಿ ಬಗ್ಗೆ ಕೇಂದ್ರ ಅಧಿಕಾರಿಗಳು ಗುಡ್ ಅಂದಿದ್ದಾರೆ. ಅವರು ಕೇಳಿದ ಎಲ್ಲ ಅಂಕಿ ಅಂಶಗಳನ್ನು ‌ನಾವು ಕೊಟ್ಟಿದ್ದೇವೆ. ಮಳೆ ಅಳತೆ‌ ಮಾಡುವ ವ್ಯವಸ್ಥೆ ನಮ್ಮಲ್ಲಿ ಚೆನ್ನಾಗಿದೆ. ನಿಖರವಾದ ಅಂಕಿಅಂಶಗಳನ್ನು ‌ನಾವು ಕೊಟ್ಟಿದ್ದೇವೆ. ನ್ಯಾಯೂತವಾಗಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಕೇಂದ್ರ ಮಾಡುತ್ತೆ. ನಮ್ಮ ಮನವಿಗೆ ಸ್ಪಂದನೆ ಮಾಡ್ತಾರೆ ಎಂಬ ಭರವಸೆ ಇದೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ