ಖುಷಿ ತಡೆಯಲಾರದೆ ತಣ್ಣೀರು ಸುರಿದುಕೊಂಡು ನಮಸ್ಕಾರ ಹಾಕಿದ ಅಲ್ಲು ಅರ್ಜುನ್ ಮಗ ಅಯಾನ್
Allu Ayaan: ಅಲ್ಲು ಅರ್ಜುನ್ ಮಗ ಅಯಾನ್ ಪಕ್ಕಾ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಫ್ಯಾನ್. ಪಂದ್ಯ ಗೆದ್ದ ಖುಷಿಯಲ್ಲಿ ಏನು ಮಾಡಬೇಕು ಎಂಬುದೇ ಅವರಿಗೆ ತಿಳಿದಿಲ್ಲ. ಹೀಗಾಗಿ ಅವರು ಹೇಗೇಗೋ ಆಡಿದ್ದಾರೆ. ಈ ಸಂದರ್ಭದ ವಿಡಿಯೋನ ಅಲ್ಲು ಅರ್ಜುನ್ ಅವರು ಹಂಚಿಕೊಂಡಿದ್ದಾರೆ.
ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ (Virat Kohli) 18 ವರ್ಷಗಳ ಬಳಿಕ ಐಪಿಎಲ್ ಕಪ್ ಎತ್ತೋದನ್ನು ನೋಡಿ ಭಾವುಕರಾದರು. ಅವರು ನೆಲಕ್ಕೆ ಬಿದ್ದು ನಮಸ್ಕಾರ ಹಾಕಿದರು. ಅಷ್ಟೇ ಏಕೆ ಖುಷಿಯಲ್ಲಿ ಏನು ಮಾಡಬೇಕು ಎಂದು ತಿಳಿಯದೇ ತಲೆಯ ಮೇಲೆ ತಣ್ಣೀರನ್ನು ಹೊಯ್ದುಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋನ ಅಲ್ಲು ಅರ್ಜುನ್ ಹಂಚಿಕೊಂಡಿದ್ದಾರೆ. ಅಲ್ಲು ಅಯಾನ್ ಅದೆಷ್ಟು ಭಾವುಕರಾಗಿದ್ದರು ಎಂಬದನ್ನು ವಿಡಿಯೋದಲ್ಲಿ ನೀವು ಕಾಣಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 04, 2025 07:13 AM
Latest Videos