ಆರ್ಸಿಬಿ ಮ್ಯಾಚ್ ನೋಡುತ್ತಲೇ ಮುಗಿದಯೋಯ್ತು ವೈಷ್ಣವಿ ‘ಸಂಗೀತ್’ ಕಾರ್ಯಕ್ರಮ
ಆರ್ಸಿಬಿ ಕೊನೆಗೂ ಕಪ್ ಎತ್ತಿದೆ. ಹಲವು ವರ್ಷಗಳ ಕನಸು ಈಡೇರಿದೆ. ಈಗ ಆರ್ಸಿಬಿ ಗೆಲವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಅದರಲ್ಲೂ ವೈಷ್ಣವಿ ಗೌಡ ಅವರು ತಮ್ಮ ಸಂಗೀತ ಕಾರ್ಯಕಕ್ರಮದಲ್ಲಿ ಆರ್ಸಿಬಿ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಪಂದ್ಯ ಗೆದ್ದ ಖುಷಿ ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತು.
ವೈಷ್ಣವಿ ಗೌಡ (Vaishnavi Gowda) ಅವರ ಮನೆಯಲ್ಲಿ ಮದುವೆ ಸಂಭ್ರಮ. ಅವರು ಅನುಕೂಲ್ ಮಿಶ್ರಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಜೂನ್ 3ರಂದು ವೈಷ್ಣವಿ ಗೌಡ ಅವರ ಸಂಗೀತ ಕಾರ್ಯಕ್ರಮ ನಡೆದಿದೆ. ಈ ವೇಳೆ ದೊಡ್ಡದಾಗಿ ಸ್ಕ್ರಿನ್ ಹಾಕಲಾಗಿತ್ತು. ಈ ಸ್ಕ್ರಿನ್ನಲ್ಲಿ ವೈಷ್ಣವಿ ಗೌಡ, ಆಪ್ತರು ಹಾಗೂ ನೆಂಟರು ಆರ್ಸಿಬಿ vs ಪಂಜಾಬ್ ಮ್ಯಾಚ್ ಲೈವ್ ನೋಡಿ ಸಂಭ್ರಮಿಸಿದ್ದಾರೆ. ಅಲ್ಲಿ ಹಾಡಿಗಿಂತ, ಆರ್ಸಿಬಿ ಬ್ಯಾಟಿಂಗ್ ವೇಳೆ ಬರುತ್ತಿದ್ದ ಸಿಕ್ಸರ್ ಹಾಗೂ ಫೋರ್ಗಳಿಗೆ ಹೆಚ್ಚು ಸ್ಟೆಪ್ ಬೀಳುತ್ತಿತ್ತು. ಇನ್ನು, ಪಂಜಾಬ್ ತಂಡದ ವಿಕೆಟ್ ಬೀಳುವಾಗ ಇವರು ಕುಣಿದು ಕುಪ್ಪಳಿಸುತ್ತಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 04, 2025 06:49 AM
Latest Videos