ದೇವರು ಈಶ್ವರಪ್ಪ ಮತ್ತು ನನಗೆ ಒಳ್ಳೆಯ ಸಂತಾನವನ್ನು ದಯಪಾಲಿಸಿದ್ದಾನೆ: ಬಸನಗೌಡ ಪಾಟೀಲ್ ಯತ್ನಾಳ್

Updated on: May 17, 2025 | 10:22 AM

ಡಾ ಬಿಅರ್ ಅಂಬೇಡ್ಕರ್ ಅವರ ಪ್ರಯತ್ನಗಳ ಫಲವಾಗಿಯೇ ದಲಿತರಿಗೆ, ಮತ್ತು ಮಹಿಳೆಯರಿಗೆ ಮೀಸಲಾತಿ ಸಿಕ್ಕಿದೆ, ದಿನಕ್ಕೆ ಎಂಟು ತಾಸು ದುಡಿಯಬೇಕು ಎಂದು ಹೇಳಿದ್ದೇ ಅವರು, ಇವತ್ತು ಹಾಲು ಮತಕ್ಕೆ ಸೇರಿದ ಯುವಕನೊಬ್ಬ ಐಪಿಎಸ್ ಪಾಸು ಮಾಡಿದ್ದು ನೋಡಿ ಬಹಳ ಸಂತೋಷವಾಗುತ್ತದೆ, ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಬಂದ ಬಳಿಕ ಅವನ ಮುಖದಲ್ಲಿ ಅದೇನು ಕಳೆ ಎಂದು ಯತ್ನಾಳ್ ಹೇಳಿದರು.

ದಾವಣಗೆರೆ, ಮೇ 17: ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಎಸ್ ಈಶ್ವರಪ್ಪ (KS Eshwarappa) ಸಮಾನ ದುಃಖಿಗಳು, ಒಂದೇ ಬಳ್ಳಿಯ ಹೂಗಳು ಮತ್ತು ಒಂದೇ ದೋಣಿಯ ಪಯಣಿಗರು! ಯಾಕೆ ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ದಾವಣಗೆರೆಯಲ್ಲಿ ನಿನ್ನೆ ನಡೆದ ಸಮಾರಂಭವೊಂದರಲ್ಲಿ ಅವರು ಜೊತೆಗೂಡಿದ್ದರು. ತಮ್ಮ ಭಾಷಣದಲ್ಲಿ ಯತ್ನಾಳ್, ಈಶ್ವರಪ್ಪರನ್ನು ಹೊಗಳಿದರು ಮತ್ತು ತನಗೆ ಮತ್ತು ಈಶ್ವರಪ್ಪನವರಿಗೆ ದೇವರು ಒಳ್ಳೆಯ ಸಂತಾನ ದಯಪಾಲಿಸಿದ್ದಾನೆ ಅಂತ ಹೇಳಿ ಖುಷಿಪಟ್ಟರು. ಬೇರೆ ಕೆಲ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ತೆಗೆದುಕೊಂಡು ರಾತ್ರಿ ಎಲ್ಲೋ ಬಿದ್ದುಕೊಂಡಿರುತ್ತಾರೆ ಎಂದು ಹೇಳಿದ ಯತ್ನಾಳ್ ದಾವಣಗೆರೆ ಜಿಲ್ಲೆಯಲ್ಲೂ ಒಂದಿಬ್ಬರು ರಾಜಕಾರಣಿಗಳ ಮಕ್ಕಳು ಆ ಕೆಟೆಗಿರಿಗೆ ಸೇರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:  ಸಹಾಯ ಕೇಳಿ ಯಾರಲ್ಲೂ ಹೋಗಿಲ್ಲ, ಪಕ್ಷದ ವರಿಷ್ಠರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಬಸನಗೌಡ ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More